ರಾಜಕಾರಣಿಗಳು ಅಹಂಕಾರ ತ್ಯಜಿಸಲಿ: ಆಡ್ವಾಣಿ
ಪುಣೆ: ಭ್ರಷ್ಟಾಚಾರ ಎಂಬ ದೊಡ್ಡ ಸಮಸ್ಯೆಯಿಂದ ದೇಶ ನರಳುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ಶನಿವಾರ ಹೇಳಿದ್ದಾರೆ. ರಾಜಕಾರಣಿಗಳು ಅಹಂಕಾರದ ಕೂಪದಿಂದ ಹೊರಬರಬೇಕು ಆಗ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಅಹಂಕಾರದ ಅಮಲಿನಲ್ಲಿ ರಾಜಕಾರಣಿಗಳು ತಮಗೆ ಬೇಕಾದುದ್ದನ್ನು ನಿರಾಯಾಸವಾಗಿ ಮಾಡುತ್ತಿದ್ದಾರೆ. ಹೀಗಾಗಿ ರಾಜಕಾರಣಿಗಳು ಮೊದಲು ಅಹಂಕಾರದಿಂದ ಹೊರಬರಬೇಕು ಎಂದು ಆಡ್ವಾನಿ ಸಲಹೆ ನೀಡಿದ್ದಾರೆ.
ಸಿಂಧಿ ಜನಾಂಗದ ಆಧ್ಯಾತ್ಮಿಕ ಗುರು ದಾದಾ ಜೆ.ಪಿ. ವಾಸ್ವಾನಿ ಅವರ 95ನೇ ಜನ್ಮದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮುಕ್ತ ದೇಶವನ್ನು ಕಾಣಬೇಕಾದರೆ ರಾಜಕಾರಣಿಗಳು ಮೊದಲು ಭ್ರಷ್ಟಚಾರದಿಂದ ಹೊರ ಬರಬೇಕು. ಅಲ್ಲದೆ ತಮ್ಮ ಜೀವನದಲ್ಲಿ ಆಧ್ಯಾತ್ಮಕತೆಯನ್ನು ಅಳವಡಿಸಿಕೊಂಡು ನಡೆಯಬೇಕು ಎಂದರು.
ಇದೇ ವೇಳೆ ಮಾತನಾಡಿದ ದಾದಾ ವಾಸ್ವಾನಿ ಅವರು, ಜನರ ಪರಿವರ್ತನಾಕಾರ್ಯದಲ್ಲಿ ಸಾಧು ವಾಸ್ವಾನಿ ಮಿಷನ್ ಸಮಾಜದ ಉದ್ಧಾರಕ್ಕಾಗಿ ಶ್ರಮಿಸುತ್ತಿದೆ. ಉತ್ತಮ ಮಟ್ಟದ ಆಧ್ಯಾತ್ಮಿಕತೆ ಭೋದಿಸುತ್ತಾ ಬಂದಿದೆ. ಆದರೆ ಸಮಾಜದಲ್ಲಿ ಪರಿವರ್ತನೆ ಆಗಬೇಕಾದರೆ ಅದಕ್ಕೆ ಸಮಯಬೇಕು ಎಂದರು.