ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸದನ ವೇಳೆ ಸಹಕರಿಸುವಂತೆ ವಿಪಕ್ಷಗಳಲ್ಲಿ ಪ್ರಧಾನಿ ಮನವಿ

ಸೋಮವಾರದಿಂದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಈ ಬಾರಿಯಾದರೂ ಸುಗಮ ಕಾಲಪಕ್ಕೆ ಅವಕಾಶ ನೀಡುವಂತೆ...

Vishwanath S
Updated On : 3 Aug 2013, 5:41 am

ನವದೆಹಲಿ: ಸೋಮವಾರದಿಂದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಈ ಬಾರಿಯಾದರೂ ಸುಗಮ ಕಾಲಪಕ್ಕೆ ಅವಕಾಶ ನೀಡುವಂತೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಶನಿವಾರ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದ್ದಾರೆ.

ಕಳೆದ ಎರಡು ಮೂರು ಸಂಸತ್ ಅಧಿವೇಶನಗಳು ಹಲವು ಕಾರಣಗಳಿಂದಾಗಿ ವ್ಯರ್ಥವಾಗಿದ್ದು, ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಸೋಮವಾರದಿಂದ ಆರಂಭಗೊಳ್ಳುವ ಮುಂಗಾರು ಅಧಿವೇಶನದಲ್ಲಿ ಮಹತ್ವದ ಆಹಾರ ಭದ್ರತೆ ಮಸೂದೆ ಸೇರಿದಂತ ಪ್ರಮುಖ ವಿಷಯ ಚರ್ಚೆಗೆ ಸಹಕಾರಿಸುವಂತೆ ಪ್ರತಿಪಕ್ಷಗಳಿಗೆ ಸಿಂಗ್ ಮನವಿ ಮಾಡಿದ್ದಾರೆ.

ಸದನದನ ಕಲಾಪಗಳು ಸುಗಮವಾಗಿ ನಡೆಯಲು ಪ್ರತಿಪಕ್ಷಗಳು ಸಹಕರಿಸಿದರೆ ಶಾಸಕಾಂಗ ವ್ಯವಹಾರಗಳು ಹಾಗೂ ಆಹಾರ ಭದ್ರತೆ ಕಾಯ್ದೆ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಸಿಂಗ್ ಹೇಳಿದ್ದಾರೆ. ಅಲ್ಲದೆ ಸದನದಲ್ಲಿ ಪ್ರತಿಪಕ್ಷಗಳು ಪ್ರಸ್ತಾಪಿಸುವ ಎಲ್ಲ ವಿಷಯಳ ಬಗ್ಗೆ ಚರ್ಚಿಸುವ ಭರವಸೆ ನೀಡಿದ್ದಾರೆ.

ಪ್ರತಿಪಕ್ಷಗಳು ಸಹಕರಿಸಿದರೆ ಮುಂದಿನ ಮುಂಗಾರು ಅಧಿವೇಶನ ರಚನಾತ್ಮಕ ಹಾಗೂ ಲಾಭದಾಯಕವಾಗಲಿದೆ ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಬಾಕಿ ಉಳಿದಿರುವ ಶಾಸಕಾಂಗ ವ್ಯವಹಾರಗಳ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement