ಹಳೆ ಪ್ರಕರಣ ಕೈಗೆತ್ತಿಕೊಂಡ ಐಪಿಎಸ್ ಅಧಿಕಾರಿ ವರ್ಗಾವಣೆ
ಮುಂಬೈ: ಕಾಂಗ್ರೆಸ್ ಶಾಸಕರೊಬ್ಬರ ತಂದೆ ಭಾಗಿಯಾಗಿದ್ದ 48 ವರ್ಷಗಳ ಹಳೇಯ ಪ್ರಕರಣವೊಂದರ ಮರು ತನಿಖೆ ಕೈಗೊಂಡ ಐಪಿಎಸ್ ಅಧಿಕಾರಿಯನ್ನು ಮುಂಬೈ ಸರ್ಕಾರ ದಿಢೀರನೆ ವರ್ಗಾವಣೆ ಮಾಡಿದೆ.
ಉತ್ತರ ಪ್ರದೇಶ ಐಪಿಎಸ್ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಅಮಾನತು ಪ್ರರಕಣದ ಬೆನ್ನಲ್ಲೇ, ಇತ್ತ ಮುಂಬೈ ಸರ್ಕಾರ ಜೈಸಾಲ್ಮೇರ್ನ ಐಪಿಎಸ್ ಅಧಿಕಾರಿ ಪಂಕಜ್ ಚೌದರಿ ಅವರನ್ನು ವರ್ಗಾವಣೆ ಮಾಡಿದೆ.
ಸ್ಥಳೀಯ ಕಾಂಗ್ರೆಸ್ ಶಾಸಕರಾದ ಸಾಲ್ಹೆ ಮಹಮದ್ ಅವರ ತಂದೆ ಗಾಝಿ ಫಕಿರ್ ಎಂಬುವರು 1965ರ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು. ಆದರೆ 2011ರಲ್ಲಿ ಎಎಸ್ಪಿ ಅಧಿಕಾರಿಯೊಬ್ಬರು ಪ್ರಕರಣವನ್ನು ಮುಚ್ಚಿಹಾಕಿದ್ದರು. ಜೈಸಾಲ್ಮೇರ್ನ ಎಸ್ಪಿಯಾಗಿದ್ದ ಪಂಕಜ್ ಅವರು ಪ್ರಕರಣದ ಮರು ತನಿಖೆ ಕೈಗೊಂಡಿದ್ದರು. ಪ್ರಕರಣ ಕೈಗೆತ್ತಿಕೊಂಡ 48 ಗಂಟೆಯೊಳಗೆ ಅವರನ್ನು ಕಾರ್ಯಾಕ್ಷೇತೇತರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಪಂಕಜ್ ವರ್ಗಾವಣೆಯನ್ನು ಖಂಡಿಸಿ ಪೊಲೀಸ್ ತರಭೇತಿ ಶಾಲೆ ಅಜೀರ್ನಲ್ಲಿ ಬಂದ್ಗೆ ನೀಡಿ ಸರ್ಕಾರದ ಕ್ರಮದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ.