ಚೆಕ್ ಬೌನ್ಸ್ ಪ್ರಕರಣ: ದ್ವಾರಕೀಶ್ಗೆ ನೋಟಿಸ್
ಬೆಂಗಳೂರು: ಚೆಕ್ ಬೌನ್ಸ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ಗೆ ಎಸಿಎಂಎಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.
ವಿತರಕರಾದ ಕೆ.ಸಿ.ಎನ್. ಚಂದ್ರಶೇಖರ್ ಅವರಿಗೆ ದ್ವಾರಕೀಶ್ ಚೆಕ್ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿದ್ದರಿಂದ ಚಂದ್ರಶೇಖರ್ ಅವರು ಕೋರ್ಟ್ ಮೆಟ್ಟಿಲೇರಿದ್ದರು.
ಇಂದು ಅರ್ಜಿ ಪರಿಶೀಲಿಸಿದ ಎಸಿಎಂಎಂ ಕೋರ್ಟ್ ದ್ವಾರಕೀಶ್ಗೆ ನೋಟಿಸ್ ಜಾರಿ ಮಾಡಿದ್ದು, ಕೋರ್ಟ್ಗೆ ಖುದ್ದು ಹಾಜರಾಗುವಂತೆ ಸೂಚಿಸಿದೆ.
ದ್ವಾರಕೀಶ್ ನಿರ್ಮಾಣದ 'ಚಾರುಲತ' ಚಿತ್ರಕ್ಕಾಗಿ ಚಂದ್ರಶೇಖರ ಅವರೊಂದಿಗೆ ವ್ಯವಹಾರ ನಡೆಸಿದ್ದರು. ಚಿತ್ರ ತಯಾರಿಕೆಗೆಗಾಗಿ ಕೆ.ಸಿ.ಎನ್.ಸಿ ಅವರಿಂದ ದ್ವಾರಕೀಶ್ ಹಣ ಪಡೆದಿದ್ದರು. ಆದರೆ ಚಂದ್ರು ಅವರಿಗೆ ಹಣ ಹಿಂದಿರುಗಿಸುಲು ದ್ವಾರಕೀಶ್ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು.