ಜೆಡಿಎಸ್-ಬಿಜೆಪಿ ಕೈಜೋಡಿಸಿದರೆ ಕಾಂಗ್ರೆಸ್ಗೆ ಒಳ್ಳೆಯದು: ಸಿಎಂ
ಬೆಂಗಳೂರು: ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಜೆಡಿಎಸ್ ಒಂದು ಒಪ್ಪಂದಕ್ಕೆ ಬಂದರೆ ಕಾಂಗ್ರೆಸ್ಗೆ ಸಹಾಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸೋಮವಾರ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಒಪ್ಪಂದ ಮಾಡಿಕೊಳ್ಳುವುದಾದರೆ ಅದು ಕಾಂಗ್ರೆಸ್ ಸಹಾಯವಾಗಲಿದೆ. ಈ ಮೂಲಕ ಜನರಿಗೆ ಜೆಡಿಎಸ್ ಬಣ್ಣವನ್ನು ಪರಿಚಯಿಸಬಹುದು ಎಂದು ಸಿದ್ಧರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ದೇವೇಗೌಡರು ಮತ್ತು ಅವರ ಪುತ್ರ ಕುಮಾರಸ್ವಾಮಿಯವರು ಎಷ್ಟರ ಮಟ್ಟಿಗೆ ತಮ್ಮ ಭದ್ರತೆಯ ಬಗ್ಗೆ ಯೋಚಿಸುತ್ತಾರೆ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸಬಹುದು ಎಂದು ಸಿಎಂ ಹೇಳಿದ್ದಾರೆ.
ಈಗಾಗಲೇ ಬಿಜೆಪಿಯೊಂದಿಗೆ ಜೆಡಿಎಸ್ ಕೈಜೋಡಿಸಿ ತಪ್ಪು ಮಾಡಿತ್ತು. ಆದರೆ ಮತ್ತೊಮ್ಮೆ ಜೆಡಿಎಸ್ ಆ ತಪ್ಪು ಮಾಡಲು ಹೊರಟಿದೆ. ಅವರಿಗೆ ತಾವು ಮಾಡಿರುವ ತಪ್ಪಿನ ಬಗ್ಗೆ ಅರಿವಿಲ್ಲ ಎಂದು ಸಿದ್ಧರಾಮಯ್ಯ ಅವರು ಟೀಕಿಸಿದ್ದಾರೆ.