ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ತೆಲಂಗಾಣ ರಾಜ್ಯ ರಚನೆ: ಅಧಿವೇಶನದಲ್ಲಿ ಕೋಲಾಹಲ

Mainashree
Updated On : 5 Aug 2013, 6:13 am

ನವದೆಹಲಿ: ಇಂದಿನಿಂದ ಪ್ರಾರಂಭಗೊಂಡ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತು ಕೆಲವು ಸದಸ್ಯರು ವಿರೋಧಿಸಿದ ಪರಿಣಾಮ ಕಲಾಪವನ್ನು ಮುಂದೂಡಲಾಯಿತು.

ಆಂಧ್ರ ಪ್ರದೇಶ ವಿಭಜಿಸಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಮುಂದಾದ ಕೇಂದ್ರದ ಕ್ರಮವನ್ನು ಖಂಡಿಸಿ ಕೆಲವು ಸಂಸದರು ಪ್ರತಿಭಟನೆ ನಡೆಸಿದರು. ಕಲಾಪದಲ್ಲಿ ಪ್ರತಿಭಟನೆಯ ಜೋರಾದ ಹಿನ್ನಲೆಯಲ್ಲಿ ಉಪ ಸಭಾಪತಿ ಪಿ.ಜೆ.ಕುರಿಯನ್ ಕಲಾಪವನ್ನು ಎರಡು ಬಾರಿ ಮುಂದೂಡಿದರು.

ಮದ್ಯಾಹ್ನ ಪ್ರತಿಭಟನೆಯ ನಡುವೆಯು ಕಲಾಪವನ್ನು ಕೈಗೆತ್ತಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಅಸ್ಸಾಂನ ಕೆಲವು ಸದಸ್ಯರು ಅಸ್ಸಾಂ ವಿಭಜಿಸಿ, ಬೋಡೋಲ್ಯಾಂಡ್ ರಚನೆಯಾಗಬೇಕು ಎಂದು ಆಗ್ರಹಿಸಿದರು.

ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ಆಹಾರ ಭದ್ರತೆ ಕಾಯ್ದೆಯನ್ನು ಮಂಡಿಸಲು ಸಿದ್ಧವಾಗಿದ್ದ ಕೇಂದ್ರ ಸರ್ಕಾರಕ್ಕೆ ಪ್ರತಿಭಟನೆಗಳಿಂದ ನಿರಾಸೆ ಉಂಟಾಗಿದೆ.

ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement