ನದಿ ತೀರದಲ್ಲಿ ಗಣಿಗಾರಿಕೆಗೆ ನಿಷೇಧ
ನವದೆಹಲಿ: ನದಿ ತೀರದಲ್ಲಿ ಗಣಿಗಾರಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ರಾಷ್ಟ್ರೀಯಾ ಹಸಿರು ಪೀಠ ಸೋಮವಾರ ನದಿ ಪಾತ್ರದ ಗಣಿಗಾರಿಕೆಯನ್ನು ನಿಷೇಧಿಸಿದೆ.
ದೇಶದ ಎಲ್ಲಾ ರಾಜ್ಯಗಳ ನದಿ ತೀರದಲ್ಲಿ ಮರಳು ಗಣಿಗಾರಿಗೆ ನಡೆಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆ ಮಾಡದಂತೆ ರಾಷ್ಟ್ರೀಯಾ ಹಸಿರು ಪೀಠ ಆದೇಶಿಸಿದೆ.
ನದಿ ತೀರದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಕೂಡಲೆ ನಿಲ್ಲಿಸುವಂತೆ ಆದೇಶಿಸಿ ದೇಶದ ಎಲ್ಲಾ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ರಾಷ್ಟ್ರೀಯಾ ಹಸಿರು ಪೀಠ ನೋಟಿಸ್ ಜಾರಿ ಮಾಡಿದೆ.
ಈಗಾಗಲೇ ಪರವಾನಗಿ ಪಡೆದು ನದಿ ತೀರದಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿರುವವರ ಪರವಾನಗಿ ರದ್ದು ಪಡಿಸುವಂತೆ ಹೇಳಿದೆ. ಅಲ್ಲದೆ ಹೊಸದಾಗಿ ಮರಳು ಗಣಿಗಾರಿಕೆಗೆ ನಡೆಸಲು ಪರಿಸರ ಇಲಾಖೆ ನೀಡುವ ನಿರಪೇಕ್ಷಣಾ ಪತ್ರವನ್ನು ಇನ್ನು ಮುಂದೆ ನೀಡದಂತೆ ಪರಿಸರ ಇಲಾಖೆಗೆ ಸೂಚಿಸಿದೆ.