ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೋಮಾದಲ್ಲಿದ್ದ ಚಿತ್ರದುರ್ಗದ ಚೇತನಾ ಸಾವು

ಕಳೆದ ಒಂದು ತಿಂಗಳಿಂದ ಕೋಮಾದಲ್ಲಿದ್ದ ಚಿತ್ರದುರ್ಗ ಜಿಲ್ಲೆಯ ಹಿರೇಬೆನ್ನೂರಿನ ಚೇತನಾ..

Lingaraj Badiger
Updated On : 7 Aug 2013, 4:17 am

ಬೆಂಗಳೂರು: ಕಳೆದ ಒಂದು ತಿಂಗಳಿಂದ ಕೋಮಾದಲ್ಲಿದ್ದ ಚಿತ್ರದುರ್ಗ ಜಿಲ್ಲೆಯ ಹಿರೇಬೆನ್ನೂರಿನ ಚೇತನಾ ಅವರು ಚಿಕಿತ್ಸೆ ಫಲಿಸದೇ ಬುಧವಾರ ಬೆಳಗ್ಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಚೇತನಾ ಕೋಮಾ ಸ್ಥಿತಿಗೆ ತಲುಪಲು ಓವರ್ ಡೋಸ್ ಕಾರಣ ಎಂದು ಆರೋಪಿಸಿಲಾಗಿತ್ತು. ಆದರೆ ಚೇತನಾಳ ಸಾವಿನ ನಂತರ ಅವರ ಸಾವಿನ ಸತ್ಯ ಬಹಿರಂಗಗೊಂಡಿದ್ದು, ಚೇತನಾಳ ಸಾವಿಗೆ ಓವರ್ ಡೋಸ್ ಕಾರಣ ಅಲ್ಲ ಎಂದು ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸತೀಶ್ ಅವರು ಸ್ಪಷ್ಟ ಪಡಿಸಿದ್ದಾರೆ.

ಮೇ ತಿಂಗಳಲ್ಲಿ ಚೇತನಾ ಅವರಿಗೆ ನಾಯಿ ಕಚ್ಚಿದ್ದರಿಂದ ಅವರಿಗೆ ರೇಬಿಸ್ ಇದ್ದಿದ್ದು ಪರೀಕ್ಷೆಯಲ್ಲಿ ದೃಡಪಟ್ಟಿತ್ತು. ನಾಯಿ ಕಚ್ಚಿದ್ದರಿಂದ ಚೇತನಾ ಅವರ ನರಗಳಿಗೆ ಹಾಗೂ ಮೆದುಳಿಗೆ ಇನ್‌ಫೆಕ್ಷನ್ ಆಗಿತ್ತು ಎಂದು ಸತೀಶ್ ಅವರು ತಿಳಿಸಿದ್ದಾರೆ.

ಚಳಿ, ಜ್ವರದಿಂದಾಗಿ ಚೇತನಾ ಅವರು ಜುಲೈ 14ರಂದು ಚಿತ್ರದುರ್ಗದ ಕೃಷ್ಣಾ ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಆಸ್ಪತ್ರೆಯ ವೈದ್ಯ ಡಾ.ದೀಪಕ್ ಅವರು ಚೇತನಾ ಅವರಿಗೆ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆಯ ಬಳಿಕ ಅವರು ಕೋಮಾಸ್ಥಿತಿಗೆ ಜಾರಿದ್ದರು. ಇದಕ್ಕೆ ಓವರ್ ಡೋಸ್ ಕಾರಣ ಎಂದು ಚೇತನಾ ಸಂಬಂಧಿಕರು ಆರೋಪಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement