ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಖಂಡ ಆಂಧ್ರಕ್ಕೆ ಬೆಂಬಲಿಸಿ ಮತ್ತಿಬ್ಬರು ಸಚಿವರ ರಾಜಿನಾಮೆ

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಸಂಬಂಧ ಕೇಂದ್ರ ಸರ್ಕಾರದ ನಿರ್ಧಾರ ಹೊರಬೀಳುತ್ತಿದಂತೆ ಅಖಂಡ ಆಂಧ್ರ ಪ್ರದೇಶಕ್ಕೆ...

Vishwanath S
Updated On : 12 Aug 2013, 6:45 am

ಹೈದರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಸಂಬಂಧ ಕೇಂದ್ರ ಸರ್ಕಾರದ ನಿರ್ಧಾರ ಹೊರಬೀಳುತ್ತಿದಂತೆ ಅಖಂಡ ಆಂಧ್ರ ಪ್ರದೇಶಕ್ಕೆ ಆಗ್ರಹಿಸಿ ಸೀಮಾಂಧ್ರ ಪ್ರದೇಶದ ಮತ್ತಿಬ್ಬರು ಸಚಿವರು ಸೋಮವಾರ ರಾಜಿನಾಮೆ ನೀಡಿದ್ದಾರೆ.

ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಸಂಪುಟ ಸಚಿವರಾದ ಆರೋಗ್ಯ ಸಚಿವ ಕುಂಡ್ರೂ ಮುರಳಿ ಮೋಹನ್ ಹಾಗೂ ಅರಣ್ಯ ಸಚಿವ ವಿಜಯರಾಮ ರಾಜು ಅವರು ಇಂದು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರನ್ನು ಭೇಟಿಯಾಗಿ ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದರು.

ಅಖಂಡ ಆಂಧ್ರ ಪ್ರದೇಶಕ್ಕಾಗಿ ಆಗ್ರಹಿಸಿ ಈವರೆಗೂ ರಾಯಲಸೀಮಾ ಮತ್ತು ಆಂಧ್ರ ಭಾಗದಿಂದ 8 ಮಂದಿ ಸಚಿವರು ರಾಜಿನಾಮೆ ನೀಡಿದಂತಾಗಿದ್ದು, ಆಂಧ್ರ ವಿಭಜನೆ ನಿರ್ಧಾರ ಹೊರಬಿದ್ದಾಗಿನಿಂದ 50ಕ್ಕೂ ಹೆಚ್ಟು ಮಂದಿ ಶಾಸಕರು ರಾಜಿನಾಮೆ ನೀಡಿದ್ದಾರೆ.

ಆಂಧ್ರ ವಿಭಜನೆಗೆ ಒತ್ತಾಯಿಸಿ ಕೇಂದ್ರಕ್ಕೆ ನೀಡಿರುವ ಪತ್ರಗಳನ್ನು ರಾಜಕೀಯ ಪಕ್ಷಗಳು ಹಿಂಪಡೆಯುವಂತೆ ಇದೇ ವೇಳೆ ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement