ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚುನಾವಣೆ ಪ್ರಣಾಳಿಕೆಗೆ ಮಿತಿ: ರಾಜಕೀಯ ಪಕ್ಷಗಳಿಂದ ವಿರೋಧ

Vishwanath S
Updated On : 12 Aug 2013, 5:40 am

ನವದೆಹಲಿ: ಹಲವು ಆಮಿಷಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆ ಮೇಲೆ ನಿರ್ಬಂಧ ಹೇರುವ ಕೇಂದ್ರ ಚುನಾವಣಾ ಆಯೋಗದ ಕ್ರಮವನ್ನು ರಾಜಕೀಯ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ.

ಆದರೆ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಮಾತ್ರ ಚುನಾವಣಾ ಪ್ರಣಾಳಿಕೆ ಮೇಲೆ ನಿರ್ಬಂಧ ಹೇರುವುದಲ್ಲ ಚುನಾವಣಾ ಪ್ರಣಾಳಿಕೆಯನ್ನೇ ನಿಷೇಧಿಸಬೇಕು ಎಂದಿದೆ.

ಇಂದು ಚುನಾವಣಾ ಆಯೋಗ ಪ್ರಮುಖ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಸಭೆ ಕರೆದಿತ್ತು. ಚುನಾವಣೆಗೆ ರಾಜಕೀಯ ಪಕ್ಷಗಳು ಬಿಡುಗಡೆ ಮಾಡುವ ಪ್ರಣಾಳಿಕೆ ಬಗ್ಗೆ ಮಾರ್ಗದರ್ಶನ ನೀಡಲು ಹಾಗೂ ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಸಭೆಯಲ್ಲಿ ಸಂಗ್ರಹಿಸಲಾಯಿತು. ಈ ವೇಳೆ ಚುನಾವಣಾ ಪ್ರಣಾಳಿಕೆಗೆ ಚೌಕಟ್ಟು ವಿಧಿಸಲು ಮುಂದಾಗಿರುವ ಆಯೋಗದ ಕ್ರಮವನ್ನು ಬಿಎಸ್‌ಪಿ ಹೊರತು ಪಡಿಸಿ ಇನ್ನುಳಿದ ಎಲ್ಲಾ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ.

ಸಭೆಯಲ್ಲಿ ಭಾಗವಹಿಸಿದ್ದ ಐದು ರಾಷ್ಟ್ರೀಯ ಪಕ್ಷಗಳು ಹಾಗೂ 23 ಪ್ರಾದೇಶಿಕ ಪಕ್ಷಗಳು ಸಹ ಚುನಾವಣಾ ಪ್ರಣಾಳಿಕೆಗಳಿಗೆ ಚೌಕಟ್ಟು ವಿಧಿಸಲು ತೀರ್ಮಾನಿಸಿರುವ ಚುನಾವಣಾ ಆಯೋಗದ ಕ್ರಮಕ್ಕೆ ವಿರೋಧಿಸಿದವು. ಆದರೆ ಬಿಎಸ್‌ಪಿ ಮಾತ್ರ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನೇ ನಿಷೇಧಿಸಬೇಕು. ಪ್ರಣಾಳಿಕೆಗಳಲ್ಲಿ ಆಮಿಷಗಳನ್ನು ನೀಡುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಪಕ್ಷಗಳು ಗೆದ್ದು ಬಂದರು ಪ್ರಣಾಳಿಕೆಯಲ್ಲಿನ ಅಂಶಗಳನ್ನು ಜಾರಿಗೆ ತರದೆ ವಂಚಿಸುತ್ತಿವೆ ಎಂದು ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement