ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಿನ್ನದ ಮೇಲಿನ ಆಮದು ಶುಲ್ಕ ಶೇ.2ರಷ್ಟು ಹೆಚ್ಚಳ

ಚಿನ್ನ ಈಗ ಮತ್ತಷ್ಟು ದುಬಾರಿಯಾಗಲಿದೆ. ಕೇಂದ್ರ ಸರ್ಕಾರ ಮಂಗಳವಾರ ಚಿನ್ನ ಹಾಗೂ ಪ್ಲಾಟಿನಂ ಮೇಲಿನ ಆಮದು..

Lingaraj Badiger
Updated On : 13 Aug 2013, 3:51 am

ನವದೆಹಲಿ: ಚಿನ್ನ ಈಗ ಮತ್ತಷ್ಟು ದುಬಾರಿಯಾಗಲಿದೆ. ಕೇಂದ್ರ ಸರ್ಕಾರ ಮಂಗಳವಾರ ಚಿನ್ನ ಹಾಗೂ ಪ್ಲಾಟಿನಂ ಮೇಲಿನ ಆಮದು ಶುಲ್ಕವನ್ನು ಶೇ.2ರಷ್ಟು ಹೆಚ್ಚಳ ಮಾಡಿದೆ. ಅಲ್ಲದೆ ಬೆಳ್ಳಿಯ ಆಮದು ಶುಲ್ಕವನ್ನು ಸಹ ಶೇ.4ರಷ್ಟು ಹೆಚ್ಚಿಸಿದೆ.

ಈ ಮುಂಚೆ ಶೇ.8ರಷ್ಟು ಇದ್ದ ಚಿನ್ನ ಹಾಗೂ ಪ್ಲಾಟಿನಂ ಆಮದು ಶುಲ್ಕವನ್ನು ಕೇಂದ್ರ ಸರ್ಕಾರ ಇದೀಗ ಶೇ.10ಕ್ಕೆ ಹೆಚ್ಚಳ ಮಾಡಿದೆ. ಇನ್ನು ಬೆಳ್ಳಿಯ ಆಮದು ಶುಲ್ಕವನ್ನು ಶೇ.6ರಿಂದ ಶೇ.10ಕ್ಕೆ ಹೆಚ್ಚಿಸಿದೆ.

ರುಪಾಯಿ ಮೌಲ್ಯ ಕುಸಿತ ತಡೆಯಲು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಹಣಕಾಸು ಸಚಿವಾಲಯ ಇಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement