ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೋಧಗಯಾ ಸ್ಫೋಟ: ಹಿಂದು ಅರ್ಚಕನ ಬಂಧನ

ಬೋಧಗಯಾ ಸ್ಫೋಟ ಪ್ರಕರಣ ಸಂಬಂಧ ಓರ್ವ ಹಿಂದು ಅರ್ಚಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬುಧವಾರ ಬಂಧಿಸಿದೆ...

Vishwanath S
Updated On : 14 Aug 2013, 5:24 am

ಪಾಟ್ನಾ: ಬೋಧಗಯಾ ಸ್ಫೋಟ ಪ್ರಕರಣ ಸಂಬಂಧ ಓರ್ವ ಹಿಂದು ಅರ್ಚಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬುಧವಾರ ಬಂಧಿಸಿದೆ.

ಬೋಧಗಯಾ ಸರಣಿ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ, ಈ ಸಂಬಂಧ ಇಂದು ಅರ್ಚಕ ಅರುಪ್ ಬ್ರಹ್ಮಚಾರಿ ಎಂಬುವವರನ್ನು ವಶಕ್ಕೆ ತೆಗೆದುಕೊಂಡಿದೆ.

ಸ್ಫೋಟ ಸಂಭವಿಸಿದ ದಿನದಿಂದ ತಲೆ ಮರೆಸಿಕೊಂಡಿದ್ದ ದೇವಸ್ಥಾನದ ಅರ್ಚಕ ಅರುಪ್ ಬ್ರಹ್ಮಚಾರಿಯನ್ನು ಬೋಧಗಯಾ ಪೊಲೀಸರ ನೇರವಿನೊಂದಿಗೆ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಬೋಧಗಯಾದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರುಪ್ ಬ್ರಹ್ಮಚಾರಿ ಮೂಲತ ಪಶ್ಚಿಮ ಬಂಗಾಳದವನಾಗಿದ್ದು, ಬೋಧಗಯಾದ ದೇವಸ್ಥಾನವೊಂದರ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಭದ್ರತಾ ಕಾರಣಗಳಿಂದಾಗಿ ಎನ್‌ಐಎ ಅಧಿಕಾರಿಗಳು ಅರ್ಚಕನನ್ನು ಬೋಧಗಯಾದ ರಾಂಪುರ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅಲ್ಲಿನ ಕೆಲಸಗಾರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಜುಲೈ 7 ರಂದು ಬೋಧಗಯಾ ದೇವಸ್ಥಾನದ ಸುತ್ತ ಮುತ್ತಲು ಸುಮಾರು 10 ಬಾಂಬ್‌ಗಳು ಸ್ಫೋಟಗೊಂಡು, ಇಬ್ಬರು ಗಾಯಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement