ದಾವೂದ್ ಆಪ್ತ ಇಖ್ಬಾಲ್ ಮಿರ್ಚಿ ನಿಧನ
1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಆರೋಪಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ..
ಲಂಡನ್: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಆರೋಪಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಮಹಮದ್ ಇಖ್ಬಾಲ್ ಮೆಮೊನ್ ಅಲಿಯಾಸ್ ಇಖ್ಬಾಲ್ ಮಿರ್ಚಿ(63) ಬುಧವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದ ಇಖ್ಬಾಲ್ ಮಿರ್ಚಿಯನ್ನು ಲಂಡನ್ ಪೊಲೀಸರು 2011ರಲ್ಲಿ ಬಂಧಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಜಾಮೀನನ ಮೇಲೆ ಬಿಡುಗಡೆಯಾಗಿದ್ದ.
1990ರಲ್ಲೆ ಮುಂಬೈಯನ್ನು ತೊರೆದು ಲಂಡನ್ ಸೇರಿದ್ದ ಇಖ್ಬಾಲ್ ಮಿರ್ಚಿ, ಅಲ್ಲಿಂದಲೇ ತನ್ನ ದುಷ್ಕೃತ್ಯಗಳನ್ನು ನಡೆಸುತ್ತಿದ್ದ.