ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಬ್ ಮೆರಿನ್ ಸ್ಫೋಟ: 4 ಮೃತದೇಹ ಪತ್ತೆ

ಕಳೆದ ಎರಡು ದಿನಗಳ ಹಿಂದೆ ಮುಂಬೈನ ಡಾಕ್‌ಯಾರ್ಡ್‌ನಲ್ಲಿದ್ದ 'ಐಎನ್‌ಎಸ್ ಸಿಂಧು ರಕ್ಷಕ' ಸಬ್ ಮೆರಿನ್ ಸ್ಫೋಟ..

Lingaraj Badiger
Updated On : 16 Aug 2013, 2:55 am

ಮುಂಬೈ: ಕಳೆದ ಎರಡು ದಿನಗಳ ಹಿಂದೆ ಮುಂಬೈನ ಡಾಕ್‌ಯಾರ್ಡ್‌ನಲ್ಲಿದ್ದ 'ಐಎನ್‌ಎಸ್ ಸಿಂಧು ರಕ್ಷಕ' ಸಬ್ ಮೆರಿನ್ ಸ್ಫೋಟ ದುರಂತದಲ್ಲಿ ನಾಪತ್ತೆಯಾಗಿದ್ದ 18 ಸಿಬ್ಬಂದಿಯ ಪೈಕಿ ನಾಲ್ವರ ಮೃತ ದೇಹಗಳು ಶುಕ್ರವಾರ ಪತ್ತೆಯಾಗಿವೆ.

ಇಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಮೂರು ಮೃತ ದೇಹಗಳನ್ನು ಡಿಎನ್‌ಎ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು 14 ಸಿಬ್ಬಂದಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಬುಧವಾರ ಐಎನ್‌ಎಸ್ ಸಿಂಧುರಕ್ಷಕ ಸಬ್ ಮೆರಿನ್‌ನಲ್ಲಿ ಸರಣಿ ಸ್ಫೋಟ ಸಂಭವಿಸಿದ ಪರಿಣಾಮ ಭಾರಿ ಪ್ರಮಾಣದ ಬೆಂಕಿ ಹತ್ತಿಕೊಂಡಿತ್ತು. ಈ ವೇಳೆ ಸಬ್ ಮೆರಿನ್‌ನಲ್ಲಿದ್ದ ಮೂವರು ಅಧಿಕಾರಿಗಳು ಸೇರಿದಂತೆ 18 ಸಿಬ್ಬಂದಿ ನಾಪತ್ತೆಯಾಗಿದ್ದರು.

ನಿನ್ನೆಯಷ್ಟೆ ರಕ್ಷಣಾ ಸಚಿವಾಲಯ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರು ಅಧಿಕಾರಿಗಳ ಹಾಗೂ 15 ಇತರೆ ಸಿಬ್ಬಂದಿಗಳ ಮಾಹಿತಿಯನ್ನು ಬಿಡುಗಡೆ ಮಾಡಿತ್ತು.

ಲೆ.ಕಮಾಂಡರ್‌ಗಳಾದ ನಿಖಿಲೇಶ್ ಪಾಲ್, ಅಲೋಕ್ ಕುಮಾರ್ ಮತ್ತು ಆರ್ ವೆಂಕಟರಾಜ್ ನಾಪತ್ತೆಯಾದ ಅಧಿಕಾರಿಗಳು ಎಂದು ಸಚಿವಾಲಯ ಹೇಳಿದೆ.

ಇತರೆ 15 ಸಿಬ್ಬಂದಿಗಳು: ಸಂಜೀವ್ ಕುಮಾರ್, ಕೆ.ಸಿ. ಉಪಾಧ್ಯಾಯ, ಟಿಮೋಟಿ ಸಿನ್ಹಾ, ಕೇವಲ್ ಸಿಂಗ್, ಸುನಿಲ್ ಕುಮಾರ್, ದಾಸರಿ ಪ್ರಸಾದ್, ಲಿಜು ಲಾರೆನ್ಸ್, ರಾಜೇಶ್ ತೂಟಿಕ, ಅಮಿತ್ ಕೆ ಸಿಂಗ್, ಅತುಲ್ ಶರ್ಮಾ ಮತ್ತು ವಿಕಾಶ್ ಇ, ನರುತ್ತಮ್ ದಿಯೋರಿ, ಮಲಯ್ ಹಲ್ದಾರ್, ವಿಷ್ಣು ವಿ ಮತ್ತು ಸೀತಾರಾಂ ಬಡಪಲ್ಲಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement