ಬೋದ್ಗಯಾ ಸ್ಪೋಟ: ಇಬ್ಬರು ಬಂಧನ
ನವದೆಹಲಿ: ಬೋದ್ಗಯಾ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಬಿಹಾರದಲ್ಲಿ ಇಬ್ಬರು ಅನುಮಾನಸ್ಪದ ವ್ಯಕ್ತಿಗಳನ್ನು ಬಂಧಿಸಿದೆ.
ಬಿಹಾರದ ದರ್ಬಾಂಗ್ ಪ್ರದೇಶದಲ್ಲಿ ಈ ಇಬ್ಬರು ಅನುಮಾನಸ್ಪದ ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಬೌದ್ಧರ ಪರಮ ಪವಿತ್ರ ಕ್ಷೇತ್ರವಾಗಿರುವ ಜಗತ್ಪ್ರಸಿದ್ಧ ಬೋದ್ ಗಯಾ ಮತ್ತು ಮಹಾ ಬೋಧಿ ದೇಗುಲ ಆವರಣದಲ್ಲಿ ಜುಲೈ 7ರಂದು ಶಂಕಿತ ಇಂಡಿಯನ್ ಮುಜಾಹಿದಿನ್ ವ್ಯವಸ್ಥಿತವಾಗಿ ನಡೆಸಿದ ಒಂಬತ್ತು ಕಡಿಮೆ ತೀವ್ರತೆಯ ಬಾಂಬ್ ಸ್ಪೋಟದಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಗಾಯಗೊಂಡಿದ್ದರು.