ಮಣಿಪುರದಲ್ಲಿ ಬಾಂಬ್ ಸ್ಫೋಟ: 3 ಸಾವು
ಮಣಿಪುರ: ರಸ್ತೆಬದಿಯಲ್ಲಿರುವ ಹೋಟೆಲ್ ಬಳಿ ಬಾಂಬ್ ಸ್ಪೋಟಗೊಂಡ ಪರಿಣಾಮ ಸ್ಥಳದಲ್ಲೇ ಮೂರು ಜನ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ಸಂಭವಿಸಿದೆ.
ಪಶ್ಚಿಮ ಬಂಗಾಳದ ಇಂಪಾಲ್ ಹೊರವಲಯದಲ್ಲಿರುವ ಮಂತ್ರಿಪುಕ್ರಿ ಎಂಬ ಪ್ರದೇಶಲ್ಲಿರುವ ಹೋಟೆಲ್ ಗುರಿಯಾಗಿಟ್ಟುಕೊಂಡು ಪ್ರಬಲ ಬಾಂಬ್ ಸ್ಫೋಟಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಘಟನೆಯಲ್ಲಿ ಮೂವರು ಹೋಟೆಲ್ ಕಾರ್ಮಿಕರು ಮೃತಪಟ್ಟಿದ್ದು, ಗಾಯಗೊಂಡಿರುವ ಅನೇಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.