25 ಈಜಿಪ್ಟ್ ಸೈನಿಕರನ್ನು ಹತ್ಯೆಗೈದ ಉಗ್ರರು
ಈಜಿಪ್ಟ್: ಶಂಕಿತ ಉಗ್ರರು ಈಜಿಪ್ಟ್ ಸೈನಿಕರ ಮೇಲೆ ದಾಳಿ ಮಾಡಿದ ಪರಿಣಾಮ 25 ಸೈನಿಕರು ಮೃತಪಟ್ಟಿರುವ ಘಟನೆ ಸೋಮವಾರ ವರದಿಯಾಗಿದೆ.
ಗಡಿ ಪ್ರದೇಶವಾದ ರಫಾ ಎಂಬಲ್ಲಿ ರಾಕೆಟ್ ಪ್ರಾಪೆಲ್ಟ್ ಗ್ರೆನೇಡ್ನಿಂದ ದಾಳಿ ಮಾಡಿದ ಶಂಕಿತ ಉಗ್ರರು 25ಕ್ಕೂ ಹೆಚ್ಚು ಈಜಿಪ್ಟ್ ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಈಜಿಪ್ಟ್ನ ಖಾಸಗಿ ಚಾನೆಲ್ವೊಂದರಲ್ಲಿ ವರದಿಯಾಗಿದೆ.
ಸಿನೈ ಪೆನಿನ್ಸುಲಾ ಎಂಬಲ್ಲಿ ಭದ್ರತಾ ಸಿಬ್ಬಂದಿಗಳನ್ನು ಕೊಂಡುಯ್ಯುತ್ತಿದ್ದ ಎರಡು ಬಸ್ಸುಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ಪ್ರದೇಶದಲ್ಲಿ ಉಗ್ರರು ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಮುಂಚೆ ಇದೇ ರೀತಿ ದಾಳಿ ಮಾಡಿ ಘಟನೆಯಲ್ಲಿ 500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ರಫಾ ಎಂಬುದು ಈಜಿಪ್ಟ್ ಮತ್ತು ಗಜಾ ದೇಶಗಳ ಗಡಿಭಾಗವಾಗಿದೆ. 6 ದಿನಗಳ ಹಿಂದೆಯಷ್ಟೇ 7ಈಜಿಪ್ಟ್ ಸೈನಿಕರನ್ನು ಅಪಹರಿಸಲಾಗಿತ್ತು ಎಂದು ಈಜಿಪ್ಟ್ ಸೈನಿಕ ದಳದ ವಕ್ತಾರರು ತಿಳಿದ್ದಾರೆ.