ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎಲ್‌ಒಸಿ ಹತ್ಯೆಯ ಹಿಂದೆ ಪಾಕ್ ಸೇನೆಯ ಕೈವಾಡ: ಆಂಟನಿ

ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯ ಬಳಿ ಐವರು ಭಾರತೀಯ ಯೋಧರ ಹತ್ಯೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿನ..

Lingaraj Badiger
Updated On : 19 Aug 2013, 4:12 am

ನವದೆಹಲಿ: ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯ ಬಳಿ ಐವರು ಭಾರತೀಯ ಯೋಧರ ಹತ್ಯೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿನ ಕದನ ವಿರಾಮ ಉಲ್ಲಂಘನೆಗೆ ಪಾಕಿಸ್ತಾನ ಸೇನೆ ಕಾರಣ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಸೋಮವಾರ ದೂರಿದ್ದಾರೆ.

ಎಲ್‌ಒಸಿ ಮತ್ತು ಅಂತರಾಷ್ಟ್ರೀಯ ಗಡಿ ಪರಿಸ್ಥಿತಿಯ ಬಗ್ಗೆ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ ಆಂಟನಿ, ಪದೇಪದೆ ಗಡಿಯಲ್ಲಿ ಗುಂಡಿನ ದಾಳಿ ಮಾಡುವುದರಿಂದ ಎಲ್‌ಒಸಿ ಬಗೆಗಿನ ನಮ್ಮ ನಿಲುವಿನ ಮೇಲೆ ಮತ್ತು ಪಾಕಿಸ್ತಾನೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂದರು.

ಪಾಕಿಸ್ತಾನ ಸೇನೆಯೇ ಇತ್ತೀಚಿಗೆ ಎಲ್‌ಒಸಿ ಬಳಿ ಐವರು ಯೋಧರನ್ನು ಹತ್ಯೆ ಮಾಡಿದ್ದು ಎಂದು ಆರೋಪಿಸಿದ ಆಂಟನಿ, ಎಲ್‌ಒಸಿ ಹತ್ಯೆಯ ಹಿಂದೆ ಪಾಕ್ ಸೇನೆಯ ವಿಶೇಷ ತಂಡದ ಪಾತ್ರವಿದೆ ಎಂದು ಹೇಳಿದರು.

ಪಾಕ್ ಪದೇಪದೆ ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ದಾಳಿ ನಡೆಸುತ್ತಿರುವ ಬಗ್ಗೆ ಸರ್ಕಾರ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಆಂಟನಿ ಇಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದರು.

70 ಬಾರಿ ಉಲ್ಲಂಘನೆ: ಜ.1ರಿಂದ ಆ.5ರವರೆಗೆ ಪಾಕಿಸ್ತಾನವು ಗಡಿನಿಯಂತ್ರಣ ರೇಖೆಯಲ್ಲಿ ಸುಮಾರು 70 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕದನ ವಿರಾಮ ಉಲ್ಲಂಘನೆ ಪ್ರಕರಣ ಶೇ. 85ರಷ್ಟು ಹೆಚ್ಚಳವಾಗಿದೆ. ಈ ನಡುವೆ, ಪಾಕಿಸ್ತಾನ ಸೇನೆ ಭಾರತೀಯ ಯೋಧರ ಮೇಲಷ್ಟೇ ಅಲ್ಲದೆ ಗಡಿನಿಯಂತ್ರ ರೇಖೆ ಆಸುಪಾಸಿನ ಹಳ್ಳಿಗಳ ಗ್ರಾಮಸ್ಥರನ್ನೂ ಗುರಿಯಾಗಿರಿಸಿಕೊಂಡೂ ದಾಳಿ ನಡೆಸುತ್ತಿದೆ ಎಂದು ಸೇನೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement