ಚೀನಾದಲ್ಲಿ ಪ್ರವಾಹ: 91 ಮಂದಿ ಸಾವು, 111 ನಾಪತ್ತೆ
ಬಿಜಿಂಗ್: ಚೀನಾದ ದಕ್ಷಿಣ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ 91ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 111ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಹ್ಯುಬಿ, ಹುವಾನ್ ಮತ್ತು ಜಿಯಾಂಗ್‌ಜಿ ಪ್ರಾಂತ್ಯಗಳಲ್ಲಿ 111ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹ್ಯುಬಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾದ ಪ್ರವಾದಿಂದ ಭೂಕುಸಿತವಾಗಿ ಮನೆಗಳು ಕುಸಿದಿದ್ದು ಹೆಚ್ಚು ಹಾನಿ ಉಂಟಾಗಿದೆ.
ಹಿಲೋನ್ ಜಿಯಾಂಗ್, ಜಿಲಿನ್, ಲಿಯಾನಿಂಗ್ ಮತ್ತು ಗಾಂಗ್‌ಡಾಂಗ್ ಪ್ರಾಂತ್ಯಗಳಿಂದ 840,000 ಸಂತ್ರಸ್ತ್ರರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತರನ್ನು ರಕ್ಷಣೆ ಮಾಡಲು 3 ಸಾವಿರ ಸೈನಿಕರನ್ನು ನಿಯೋಜಿಲಾಗಿದ್ದು, ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾರ್ಯಚರಣೆಗೆ ಅಡ್ಡಿಉಂಟಾಗುತ್ತಿದೆ ಎಂದು ಹೇಳಿದ್ದಾರೆ.