ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಯಾತ್ರಿಗಳ ಮೇಲೆ ರೈಲು ಹರಿದು 35 ಸಾವು

ಯಾತ್ರಾರ್ಥಿಗಳ ಮೇಲೆ ರೈಲು ಹರಿದ ಪರಿಣಾಮ 35 ಜನ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಿಹಾರದ ಖಗಾರಿಯಾ...

Mainashree
Updated On : 19 Aug 2013, 3:16 am

ಪಾಟ್ನಾ: ಯಾತ್ರಾರ್ಥಿಗಳ ಮೇಲೆ ರೈಲು ಹರಿದ ಪರಿಣಾಮ 35 ಜನ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದೆ.

ಸಹಸ್ರಾದಿಂದ ಪಾಟ್ನಾಗೆ ಹೊರಟಿದ್ದ ರೈಲು ವೇಗವಾಗಿ ಬಂದು ಹಳಿಗಳನ್ನು ದಾಟುತ್ತಿದ್ದ ಯಾತ್ರಾರ್ಥಿಗಳ ಮೇಲೆ ಹರಿದು 35ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಅನೇಕ ಯಾತ್ರಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಳಿಗ್ಗೆ 8ರಿಂದ 8.30ರ ಸುಮಾರಿನಲ್ಲಿ ಧಮರ ರೈಲ್ವೇ ನಿಲ್ದಾಣದಿಂದ ಈಸ್ಟ್ ಸೆಂಟ್ರಲ್ ರೈಲ್ವೆಯ ಸಹರ್ಸ-ಮನ್ಸಿ ಮಾರ್ಗವಾಗಿ ತೆರಳಲು ಯಾತ್ರದಿಗಳು ರೈಲು ಹಳಿಗಳನ್ನು ದಾಟುತ್ತಿರಬೇಕಾದರೆ ವೇಗವಾಗಿ ಬಂದ ರಾಜ್ಯಾ ರಾಣಿ ಎಕ್ಸ್‌ಪ್ರೆಸ್ ರೈಲು ಯಾತ್ರಾದಿಗಳ ಮೇಲೆ ಹರಿದು ಅನೇಕರು ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕ ಎಸ್.ಕೆ ಭಾರದ್ವಜ್ ಅವರು ಹೇಳಿದ್ದಾರೆ.

35 ಜನರು ಸಾವನ್ನಪ್ಪಿರುವುದು ವರದಿಯಾಗಿದ್ದು, ಇನ್ನು ಮೃತದೇಹಗಳ ಪತ್ತೆಗಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದ ಅವರು, ಘಟನೆಯಿಂದ ಆಕ್ರೋಶಗೊಂಡ ಯಾತ್ರಿಕರು ಹಾಗೂ ಸ್ಥಳಿಯರು ರೈಲಿನ ಆರು ಭೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ. ರೈಲು ಚಾಲಕನ ಮೇಲೆ ಸ್ಥಳಿಯರು ಹಲ್ಲೆ ನಡೆಸಿದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement