ಕಟ್ಟಡ ಕುಸಿತ: ಮತ್ತೆರಡು ಶವ ಪತ್ತೆ, ಮೃತರ ಸಂಖ್ಯೆ 4ಕ್ಕೆ ಏರಿಕೆ
ನಿನ್ನೆ ನಿಮಾನ್ಸ್ ಬಳಿಯ ಸೋಮೇಶ್ವರನಗರದಲ್ಲಿ ಕುಸಿದು ಬಿದ್ದ ಆರು ಅಂತಸ್ತಿನ ನಿರ್ಮಾಣ..
ಬೆಂಗಳೂರು: ನಿನ್ನೆ ನಿಮಾನ್ಸ್ ಬಳಿಯ ಸೋಮೇಶ್ವರನಗರದಲ್ಲಿ ಕುಸಿದು ಬಿದ್ದ ಆರು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡದ ಅವಶೇಷಗಳಡಿ ಮಂಗಳವಾರ ಮತ್ತೆರಡು ಶವಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಇಂದು ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ ಓರ್ವ ಪುರುಷ ಹಾಗೂ ಓರ್ವ ಮಹಿಳೆಯ ಶವ ಪತ್ತೆಯಾಗಿದ್ದು, ಪುರುಷನನ್ನು ಬಿಹಾರದ ನಿರಂಜನ್ ಎಂದು ಹಾಗೂ ಮಹಿಳೆಯನ್ನು ರಾಯಚೂರಿನ ಮಾನ್ವಿ ತಾಲೂಕಿನ ನಾಗಮ್ಮ ಎಂದು ಗುರುತಿಸಲಾಗಿದೆ.
ದೇವಸ್ಥಾನಕ್ಕೆ ಸೇರಿದ ಕೆರೆ ಇದ್ದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸುತ್ತಿದ್ದ ಆರು ಅಂತಸ್ತಿನ ಅಪಾರ್ಟ್‌ಮೆಂಟ್ ನಿನ್ನೆ ಕುಸಿದು ಬಿದ್ದಿತ್ತು. ಈ ದುರ್ಘಟನೆಯಲ್ಲಿ ಈವರೆಗೆ ಒಟ್ಟು ನಾಲ್ವರು ಕಾರ್ಮಿಕರ ಶವ ಪತ್ತೆಯಾಗಿವೆ.