ಡ್ರಗ್ಸ್ ಸೇವನೆ: ನ್ಯೂಜಿಲೆಂಡ್ ಕ್ರಿಕೆಟಿಗ ಜೆಸ್ಸಿ ರೈಡರ್ಗೆ ನಿಷೇಧ
ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ನ್ಯೂಜಿಲೆಂಡ್ ಕ್ರಿಕೆಟಿಗ್ ಜೆಸ್ಸಿ ರೈಡರ್ ಅವರಿಗೆ ಆರು ತಿಂಗಳ ಕಾಲ ಕ್ರಿಕೆಟ್ನಿಂದ..
ವೆಲ್ಲಿಂಗ್ಟನ್: ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ನ್ಯೂಜಿಲೆಂಡ್ ಕ್ರಿಕೆಟಿಗ್ ಜೆಸ್ಸಿ ರೈಡರ್ ಅವರಿಗೆ ಆರು ತಿಂಗಳ ಕಾಲ ಕ್ರಿಕೆಟ್ನಿಂದ ನಿಷೇಧ ಹೇರಲಾಗಿದೆ.
ಡ್ರಗ್ಸ್ ಸೇವನೆ ಬಗ್ಗೆ ಜೆಸ್ಸಿ ರೈಡರ್ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಆರು ತಿಂಗಳ ಕಾಲ ನಿಷೇಧ ಹೇರಿದ್ದು, ಏಪ್ರಿಲ್ 19ರಿಂದಲೇ ನಿಷೇಧ ಆದೇಶ ಜಾರಿಗೆ ಬರಲಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಸ್ಸಿ ರೈಡರ್, ತಾನು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಡ್ರಗ್ಸ್ ಸೇವಿಸಿರುವುದಾಗಿ ಮಂಗಳವಾರ ಹೇಳಿದ್ದಾರೆ.