ದಾಖಲೆ ಕುಸಿತ ಕಂಡ ರುಪಾಯಿ ಮೌಲ್ಯ
ಡಾಲರ್ ಮುಂದೆ ರುಪಾಯಿ ಮೌಲ್ಯ ಭಾರೀ ಕುಸಿತವುಂಟಾಗಿದೆ. ಇಂದಿನ ವಹಿವಾಟು ಆರಂಭವಾದಾಗಲೇ ರುಪಾಯಿ ಮೌಲ್ಯ...
ಮುಂಬೈ: ಡಾಲರ್ ಮುಂದೆ ರುಪಾಯಿ ಮೌಲ್ಯ ಭಾರೀ ಕುಸಿತವುಂಟಾಗಿದೆ. ಇಂದಿನ ವಹಿವಾಟು ಆರಂಭವಾದಾಗಲೇ ರುಪಾಯಿ ಮೌಲ್ಯ 64.11 ರು.ಗೆ ಕುಸಿತವಾಗಿದ್ದು, ಇದು ದಾಖಲೆ ಕುಸಿತ ಎಂದು ಹೇಳಲಾಗುತ್ತಿದೆ.
ರುಪಾಯಿ ಮೌಲ್ಯ ಕುಸಿತಗೊಂಡಿರುವುದರಿಂದ ಷೇರು ಮಾರುಕಟ್ಟೆಯಲ್ಲಿಯೂ ಭಾರೀ ಕುಸಿತ ಕಂಡುಬಂದಿದೆ.
ಇದೀಗ ವಿದೇಶಿ ಮಾರುಕಟ್ಟೆಯಲ್ಲಿ ಡಾಲರ್ ಮುಂದೆ ರುಪಾಯಿ 98 ಪೈಸೆ ಕುಸಿತ ಕಂಡುಕೊಂಡು 64 ರು.ಗೆ ಇಳಿದಿದೆ.
ರುಪಾಯಿ ಮೌಲ್ಯ ಕುಸಿತದಿಂದಾಗಿ ಕಳೆದ ಮೂರು ದಿನಗಳಲ್ಲಿ ಸೆನ್ಸೆಕ್ಸ್ 1400 ಅಂಕ ಇಳಿಕೆ ಕಂಡುಕೊಂಡಿದ್ದು, ನಿಫ್ಟಿ ಸೂಚ್ಯಂಕದಲ್ಲಿ 91.75 ಅಂಕ ಇಳಿಕೆಯುಂಟಾಗಿದೆ.