ನನಗೂ ಮೋದಿಗೂ ಹೋಲಿಕೆ ಸಾಧ್ಯವಿಲ್ಲ, ಅಂಬಿ ಬಾಯಿ ತಪ್ಪಿ ಹೇಳಿದ್ದಾರೆ: ಸಿಎಂ
ನನಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೂ ಹೋಲಿಕೆ ಸಾಧ್ಯವಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ..
ಬೆಂಗಳೂರು: ನನಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೂ ಹೋಲಿಕೆ ಸಾಧ್ಯವಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಸತಿ ಸಂಚಿವ ಅಂಬರೀಷ್ ಅವರು ನಿನ್ನೆ ಬಾಯಿ ತಪ್ಪಿ ತಮ್ಮನ್ನು ಮೋದಿಗೆ ಹೋಲಿಸಿದ್ದಾರೆ ಎಂದು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.
ಇಂದು ವಿಧಾನಸಭೆಯಲ್ಲಿ ನಡೆದ ದೇವರಾಜ್ ಅರಸು ಜನ್ಮ ದಿನಾಚರಣೆ ವೇಳೆ, 'ಸಿದ್ದು ಕಾಂಗ್ರೆಸ್ನ ಮೋದಿ' ಎಂಬ ಅಂಬರೀಷ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ನರೇಂದ್ರ ಮೋದಿ ಸಮಾಜಮುಖಿಯಲ್ಲ. ಅವರಿಗೂ ನನಗೂ ಹೋಲಿಕೆ ಸಾಧ್ಯವಿಲ್ಲ. ಅಂಬರೀಷ್ ಅವರು ಬಾಯಿ ತಪ್ಪಿ ಮಾತನಾಡಿದ್ದಾರೆ ಅಷ್ಟೆ. ಈ ಹೋಲಿಕೆಯನ್ನು ನಾನು ಕನಸು ಮನಸಲ್ಲೂ ಒಪ್ಪಲ್ಲ ಎಂದು ಹೇಳಿದ್ದಾರೆ.
ನಿನ್ನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ್ದ ಅಂಬರೀಷ್, ನಮ್ಮಲ್ಲಿಯೂ ಒಬ್ಬ ಮೋದಿ ಇದ್ದಾರೆ. ಮೋದಿಯಿಂದ ಬಿಜೆಪಿಗೆ ಹೇಗೆ ಇಮೇಜ್ ಬಂದಿದೆಯೋ, ಹಾಗೆಯೇ ಸಿದ್ದರಾಮ್ಯ ಅವರಿಂದ ಕಾಂಗ್ರೆಸ್ಗೆ ಇಮೇಜ್ ಬರುತ್ತದೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ನ ಮೋದಿ ಎಂದು ಹೇಳಿದ್ದಾರೆ.