ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಪ್ರದೇಶದಲ್ಲಿ ಮಂಗಳವಾರ ಪಾಕಿಸ್ತಾನದ ಸೈನಿಕರು ಗುಂಡು ಹಾರಾಟ ನಡೆಸುವ...
ಪೂಂಚ್: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಪ್ರದೇಶದಲ್ಲಿ ಮಂಗಳವಾರ ಪಾಕಿಸ್ತಾನದ ಸೈನಿಕರು ಗುಂಡು ಹಾರಾಟ ನಡೆಸುವ ಮೂಲಕ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದಾರೆ.
ಹಮೀರ್ಪುರ್ನಲ್ಲಿರುವ ಭಾರತದ ಸೇನೆಯನ್ನು ಗುರಿಯಾಗಿರಿಸಿ ಪಾಕ್ ಗುಂಡಿನ ದಾಳಿ ನಡೆಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಅದೇ ವೇಳೆ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್ ಸೇನೆ ಸ್ವಯಂ ನಿಯಂತ್ರಿತ ಆಯುಧಗಳನ್ನು ಬಳಸಿ ಗುಂಡು ಹಾರಾಟ ಮಾಡಿದೆ.
ನಿನ್ನೆಯೂ ಪಾಕ್ ಸೇನೆ ಇಲ್ಲಿ ಗುಂಡು ಹಾರಿಸಿದ್ದು, ಇದಕ್ಕೆ ಭಾರತ ಪ್ರತಿದಾಳಿ ನಡೆಸಿತ್ತು.
ಪ್ರಸ್ತುತ ವರ್ಷ ಆಗಸ್ಟ್ ತಿಂಗಳವರೆಗೆ ಪಾಕ್ 82 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.