ಆಯೋಧ್ಯೆಯಿಂದ ವಿಎಚ್ಪಿ ಯಾತ್ರೆಗೆ ಅನುಮತಿ ನೀಡಿ: ವೆಂಕಯ್ಯ ನಾಯ್ಡು
ಹೈದ್ರಾಬಾದ್: ಆಯೋಧ್ಯೆಯಿಂದ ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ಯಾತ್ರೆಗೆ ಅನುಮತಿ ನೀಡಿ ಎಂದು ಬಿಜಿಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಬುಧವಾರ ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಮಾಜವಾದಿ ಪಕ್ಷ ನೇತೃತ್ವದ ಉತ್ತರ ಪ್ರದೇಶದ ಸರ್ಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಹಿಂದೂ ಪರಿಷತ್ ಯಾತ್ರೆಗೆ ಅನುವು ಮಾಡಿಕೊಡಬೇಕು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಇದು ಪ್ರಜಾಪ್ರಭುತ್ವದ ದೇಶ. ಉತ್ತರ ಪ್ರದೇಶದ ಸರ್ಕಾರ ಮುಂಜಾಗ್ರತೆ ಕ್ರಮ ಕೈಗೊಂಡು ಯಾತ್ರೆಗೆ ಕಡ್ಡಾಯವಾಗಿ ಅನುಮತಿ ನೀಡಬೇಕು. ಬೇಕಾದರೆ ಮಾರ್ಗಸೂಚಿ ನೀಡಲಿ. ಈಗಾಗಲೇ ದೇಶದ ವಿವಿಧ ಪ್ರದೇಶಗಳಲ್ಲಿ ಹಲವು ಹಿಂದೂ ಯಾತ್ರೆಗಳು ಸುಗಮವಾಗಿ ನಡೆದಿವೆ ಎಂದು ಅವರು ತಿಳಿಸಿದ್ದಾರೆ.