ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದಬೋಲ್ಕರ್ ಹತ್ಯೆ ಪ್ರಕರಣ: ಶಂಕಿತ ಆರೋಪಿಗಳ ರೇಖಾಚಿತ್ರ ಬಿಡುಗಡೆ

ಮೂಢನಂಬಿಕೆ ವಿರೋಧಿ ಹೋರಾಟಗಾರ ನರೇಂದ್ರ ದಬೋಲ್ಕರ್ ಹತ್ಯೆ ಖಂಡಿಸಿ ಪುಣೆಯಲ್ಲಿ ಬುಧವಾರ...

Rashmi Kasaragodu
Updated On : 21 Aug 2013, 1:20 am

ಪುಣೆ: ಮೂಢನಂಬಿಕೆ ವಿರೋಧಿ ಹೋರಾಟಗಾರ ನರೇಂದ್ರ ದಬೋಲ್ಕರ್ ಹತ್ಯೆ ಖಂಡಿಸಿ ಪುಣೆಯಲ್ಲಿ ಬುಧವಾರ ಬಂದ್‌ಗೆ ಆಚರಿಸಲಾಗುತ್ತಿದೆ. ಮಂಗಳವಾರ ದಬೋಲ್ಕರ್ ಆಗಂತುಕರ ಗುಂಡಿಗೆ ಬಲಿಯಾಗಿದ್ದರು.

ಮಹಾರಾಷ್ಟ್ರದಲ್ಲಿ ಮೂಢನಂಬಿಕೆ ಮತ್ತು ಬ್ಲಾಕ್ ಮ್ಯಾಜಿಕ್ ವಿರುದ್ಧ ಕಾನೂನು ಜಾರಿಗೆ ಬರುವಂತೆ ಮಾಡಿದ ಹೋರಾಟಗಾರರಾಗಿದ್ದರು ದಬೋಲ್ಕರ್.

ಬಂದ್ ಪ್ರಯುಕ್ತ ಪುಣೆಯಲ್ಲಿ ಇಂದು ಯಾವುದೇ ಆಟೋಗಳು ರಸ್ತೆಗಿಳಿದಿಲ್ಲ.

ಮಂಗಳವಾರ 70ರ ಹರೆಯದ ದಬೋಲ್ಕರ್ ಅವರು ಬೆಳಗ್ಗೆ ವಾಯುವಿಹಾರಕ್ಕೆ ಹೋದಾಗ, ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಓಂಕಾರೇಶ್ವರ ಸೇತುವೆ ಬಳಿ ದಬೋಲ್ಕರ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ದುಷ್ಕರ್ಮಿಗಳು ಅತೀ ಹತ್ತಿರದಿಂದ ದಬೋಲ್ಕರ್ ಅವರಿಗೆ ಗುಂಡಿಕ್ಕಿದ್ದು, ಎರಡು ಗುಂಡುಗಳು ಅವರ ತಲೆ ಹಿಂಭಾಗವನ್ನೇ ಸೀಳಿದೆ ಎಂದು ಪೊಲೀಸರು ಹೇಳಿದ್ದಾರೆ.

ದಬೋಲ್ಕರ್ ಹತ್ಯಾ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಪುಣೆ ಪೊಲೀಸರು, ಇದೀಗ ಶಂಕಿತ ಆರೋಪಿಗಳ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಶಂಕಿತ ಆರೋಪಿಗಳು 20-25 ವಯಸ್ಸಿನವರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಢನಂಬಿಕೆ ಮತ್ತು ದೇವಮಾನವರ ವಿರುದ್ಧ ಆಂದೋಲನ ನಡೆಸಿದ್ದ ದಬೋಲ್ಕರ್ ಅವರ ಸಾವಿನ ಸುದ್ದಿ ತಿಳಿದ ಕೂಡಲೇ ಸಾವಿರಾರು ಜನ ದಬೋಲ್ಕರ್ ಮನೆಗೆ ಬಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಆದಾಗ್ಯೂ, ದುಷ್ಕರ್ಮಿಗಳ ಬಗ್ಗೆ ಸುಳಿವು ನೀಡುವವರಿಗೆ ಮಹಾರಾಷ್ಟ್ರ ಸರ್ಕಾರ 10 ಲಕ್ಷ ರು. ಬಹುಮಾನ ಘೋಷಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement