'ಮದ್ರಾಸ್ ಕೆಫೆ'ಗೆ ಮದ್ರಾಸ್ ಹೈಕೋರ್ಟ್ ತಡೆ
ಬಾಲಿವುಡ್ ನಟ ಜಾನ್ ಅಹ್ರಾಂ ಹಾಗೂ ನರ್ಗೀಸ್ ಫಕ್ರಿ ಅಭಿನಯದ 'ಮದ್ರಾಸ್ ಕೆಫೆ' ಚಿತ್ರಕ್ಕೆ ಮದ್ರಾಸ್ ಹೈಕೋರ್ಟ್ ..
ಚೆನ್ನೈ: ಬಾಲಿವುಡ್ ನಟ ಜಾನ್ ಅಹ್ರಾಂ ಹಾಗೂ ನರ್ಗೀಸ್ ಫಕ್ರಿ ಅಭಿನಯದ 'ಮದ್ರಾಸ್ ಕೆಫೆ' ಚಿತ್ರಕ್ಕೆ ಮದ್ರಾಸ್ ಹೈಕೋರ್ಟ್ ಬುಧವಾರ ತಡೆಯಾಜ್ಞೆ ವಿಧಿಸಿದೆ.
ಚಿತ್ರದಲ್ಲಿ ತಮಿಳರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದ ತಮಿಳು ಸಂಘಟನೆಗಳು, ಚಿತ್ರ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದವು.
ಇಂದು ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ, ಚಿತ್ರ ರಿಲೀಸ್ಗೆ ತಡೆಯಾಜ್ಞೆ ನೀಡಿದೆ. ಅಲ್ಲದೆ ಈ ಸಂಬಂಧ ತಮಿಳುನಾಡು ಡಿಜಿಪಿ ಹಾಗೂ ಸೆನ್ಸಾರ್ ಮಂಡಳಿಗೆ ನೋಟಿಸ್ ಜಾರಿ ಮಾಡಿದ್ದು, ಸೆಪ್ಟೆಂಬರ್ 3ರೊಳಗೆ ನೋಟಿಸ್ಗೆ ಉತ್ತರಿಸುವಂತೆ ಸೂಚಿಸಿದೆ.
'ಮದ್ರಾಸ್ ಕೆಫೆ' ಮೂಲತಃ ಶ್ರೀಲಂಕಾದಲ್ಲಿರುವ ತಮಿಳರ ಕುರಿತಾದ ಚಿತ್ರಕಥೆ ಹೊಂದಿದ್ದು, ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯನ್ನು ಆಧರಿಸಿ ಚಿತ್ರ ತಯಾರಿಸಲಾಗಿದೆ. ಚಿತ್ರವನ್ನು ಶೂಜಿತ್ ಸರ್ಕಾರ್ ಅವರು ನಿರ್ದೇಶನ ಮಾಡಿದ್ದಾರೆ.