ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಾಟ-ಮಂತ್ರ ನಿಷೇಧಕ್ಕೆ 'ಮಹಾ' ಸರ್ಕಾರದಿಂದ ಸುಗ್ರೀವಾಜ್ಞೆ

ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಮಾಟ-ಮಂತ್ರ ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದೇ ಯಾದರೆ ಜೈಲು ಗ್ಯಾರಂಟಿ!..

Lingaraj Badiger
Updated On : 21 Aug 2013, 4:24 am

ಮುಂಬೈ: ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಮಾಟ-ಮಂತ್ರ ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದೇ ಯಾದರೆ ಜೈಲು ಗ್ಯಾರಂಟಿ!.. ಹೌದು ಮಾಟ-ಮಂತ್ರ ನಿಷೇಧಕ್ಕೆ ಮಹಾರಾಷ್ಟ್ರ ಸರ್ಕಾರ ಬುಧವಾರ ಸುಗ್ರೀವಾಜ್ಞೆ ಜಾರಿಗೊಳಿಸಿದ್ದು, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮೂಢನಂಬಿಕೆ ವಿರೋಧಿ ಮಸೂದೆ ಮಂಡನೆಯಾಗಲಿದೆ.

ಅಂಧಶ್ರದ್ಧೆ ವಿರೋಧಿ ವಿರೋಟಗಾರ ನರೇಂದ್ರ ದಾಭೋಲ್ಕ್ ಹತ್ಯೆಯ ಮಾರನೆ ದಿನವೇ ಸರ್ಕಾರ ಅವರ ಆಶಯದ ಕಾನೂನು ಜಾರಿಗೆ ಮುಂದಾಗಿದೆ. ಅಲ್ಲದೆ ದಾಭೋಲ್ಕರ್ ಅವರು ಸಿದ್ಧಪಡಿಸಿದ್ದ ಮೂಢನಂಬಿಕೆ ವಿರುದ್ಧದ ಕರಡು ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವುದಾಗಿ ಹೇಳಿದೆ.

ಮೂಢನಂಬಿಕೆ ವಿರೋಧಿ ಹೋರಾಟಗಾರ ನರೇಂದ್ರ ದಾಭೋಲ್ಕರ್ ಅವರನ್ನು ನಿನ್ನೆ ಹಾಡುಹಗಲೇ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಘಟನೆಯ ಬಗ್ಗೆ ಮಹಾರಾಷ್ಟ್ರದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ದಾಭೋಲ್ಕರ್ ಹತ್ಯೆ ಖಂಡಿಸಿ ಇಂದು ಪುಣೆ ಬಂದ್‌ಗೆ ಕರೆ ನೀಡಲಾಗಿದೆ. ರಾಜಕೀಯ ಪಕ್ಷಗಳ ನಾಯಕರೂ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕಳೆದ 2 ದಶಕಗಳಿಂದಲೂ ದಾಭೋಲ್ಕರ್(69) ಅವರು ಅಂಧಶ್ರದ್ಧೆ ನಿರ್ಮೂಲನೆ ಸಮಿತಿಯ ಮುಂದಾಳತ್ವ ವಹಿಸಿಕೊಂಡು ಮೂಢನಂಬಿಕೆ ವಿರುದ್ಧ ಹೋರಾಡುತ್ತಾ ಬಂದಿದ್ದರು. ಮೂಢನಂಬಿಕೆ ಹಾಗೂ ಮಾಟ-ಮಂತ್ರ ವಿರೋಧಿ ಕಾನೂನನ್ನು ಜಾರಿಗೆ ತರುವಂತೆ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದ ಅವರು ಇತ್ತೀಚೆಗೆ ಅದಕ್ಕಾಗಿ ಜನಾಭಿಪ್ರಾಯ ಸಂಗ್ರಹದಲ್ಲಿ ತೊಡಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement