ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಯುಪಿಎ ಸಚಿವರ ವಿರುದ್ಧ ನಿತೀಶ್ ವಾಗ್ದಾಳಿ

ಯುಪಿಎ ಸರ್ಕಾರದ ಸಚಿವರ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು,..

Lingaraj Badiger
Updated On : 21 Aug 2013, 7:08 am

ಪಾಟ್ನಾ: ಯುಪಿಎ ಸರ್ಕಾರದ ಸಚಿವರ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವರನ್ನು ಮೂರ್ಖ ಎಂದು ಜರಿದಿದ್ದಾರೆ.

37 ಜನರನ್ನು ಬಲಿ ಪಡೆದ ರೇಲ್ವೆ ದುರಂತಕ್ಕೆ ರಾಜ್ಯ ಸರ್ಕಾರವನ್ನು ದೂಷಿಸುತ್ತಿರುವ ರೇಲ್ವೆ ಖಾತೆ ರಾಜ್ಯ ಸಚಿವ ಅಧಿರ್ ರಂಜನ್ ಚೌಧರಿ ಒಬ್ಬ 'ಮುರ್ಖ'. ಅದೊಂದು ಬೆಜವಾಬ್ದಾರಿ ಹೇಳಿಕೆ ಎಂದು ನಿತೀಶ್ ಕುಮಾರ್ ಕಿಡಿಕಾರಿದ್ದಾರೆ.

ಕಳೆದ ಸೋಮುವಾರ ಬಿಹಾರದ ಧಮಾರ್ ಘಾಟ್ ರೇಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲೊಂದು ಹಳಿಗೆ ಅಡ್ಡವಾಗಿ ನಿಂತಿದ್ದ ಯಾತ್ರಾರ್ಥಿಗಳ ಮೇಲೆ ಹರಿದು 37 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯಲ್ಲಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಈ ದುರಂತಕ್ಕೆ ಬಿಹಾರ ಸರ್ಕಾರವೇ ಕಾರಣ. ಯಾತ್ರಾರ್ಥಿಗಳಿಗೆ ಬಿಹಾರ ಸರ್ಕಾರ ರೈಲಿನ ಬಗ್ಗೆ ಸರಿಯಾದ ಮಾಹಿತಿ ನೀಡಿರಲಿಲ್ಲ ಎಂದು ಚೌಧರಿ ಆರೋಪಿಸಿದ್ದರು. ಅದಕ್ಕೆ ಇಂದು ತಿರುಗೇಟು ನೀಡಿರುವ ಬಿಹಾರ ಸಿಎಂ, ಸಚಿವರನ್ನೆ ಮುರ್ಖ ಎಂದು ಕರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement