ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸುಪ್ರೀಂಗೆ ಹಾಜರಾದ ರತನ್ ಟಾಟಾ

Mainashree
Updated On : 21 Aug 2013, 2:19 am

ನವದೆಹಲಿ: ಕಾರ್ಪೋರೇಟ್ ಮಾಜಿ ಲಾಬಿಗಾರ್ತಿ ನೀರಾ ರಾಡಿಯಾ ಅವರ ಸಂಭಾಷಣೆಯುಳ್ಳ ಸಿಡಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಟಾಟಾ ಸಂಸ್ಥೆಯ ಮಾಜಿ ಅಧ್ಯಕ್ಷ ರತನ್ ಟಾಟಾ ಬುಧವಾರ ಹಾಜರಾಗಿದ್ದಾರೆ.

ವಿವಾದನ್ನುಂಟು ಮಾಡಿರುವ ನೀರಾ ರಾಡಿಯಾ ಟೇಪ್ ಹಗರಣದ ವಿರುದ್ಧ ಸ್ವಯಂ ಸೇವಾ ಸಂಸ್ಥೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಇಂದು ಅರ್ಜಿ ವಿಚಾರಣೆ ನಡೆಯಲಿದ್ದು, ಟಾಟಾ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಮೂರು ವರ್ಷಗಳ ಹಿಂದೆ ರಾಡಿಯಾ ಮತ್ತು ಟಾಟಾ ನಡುವೆ ನಡೆದ ಸಂಭಾಷಣೆ ಸೋರಿಕೆಯಾಗಿತ್ತು. ಇದನ್ನು ತನಿಖೆಗೊಳಪಡಿಸಬೇಕು ಎಂದು ಕೋರಿ ಟಾಟಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ತಮ್ಮ ಮತ್ತು ರಾಡಿಯಾ ನಡುವೆ ನಡೆದ ಸಂಭಾಷಣೆಯನ್ನು ಪ್ರಕಟಿಸಿ ತಮ್ಮ ಮೂಲಭೂತ ಹಕ್ಕಾದ ಖಾಸಗಿ ಬದುಕಿನ ಹರಣ ಮಾಡಲಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಮತ್ತು ಅದರ ತನಿಖಾ ಸಂಸ್ಥೆಗಳಿಗೆ ಟೇಪ್ ಸೋರಿಕೆಯ ತನಿಖೆ ನಡೆಸುವಂತೆ ಮತ್ತು ಅವುಗಳನ್ನು ವಶಪಡಿಸಿಕೊಳ್ಳುವಂತೆ ನಿರ್ದೇಶನ ನೀಡಬೇಕೆಂದು ರತನ್ ಟಾಟಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement