2ಜಿ ಪ್ರಕರಣ: ಕರುಣಾನಿಧಿ ಪತ್ನಿ ಸಲ್ಲಿಸಿದ್ದ ಅರ್ಜಿ ವಜಾ
ನವದೆಹಲಿ: 2ಜಿ ಸ್ಪೆಕ್ಟ್ರಾಂ ಪ್ರಕರಣದ ವಿಚಾರಣೆಗೆ ಸಾಕ್ಷಿಯಾಗಿ ಹಾಜರಾಗುವುದಕ್ಕೆ ತನಗೆ ವಿನಾಯಿತಿ ಕೊಡಿ ಎಂದು ಕೋರಿ ತಮಿಳುನಾಡಿನ ಡಿಎಂಕೆ ಪಕ್ಷದ ಮುಖಂಡ ಕರಣಾನಿಧಿ ಅವರ ಪತ್ನಿ ದಯಾಲು ಅಮ್ಮಾಲ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಆರೋಗ್ಯದಲ್ಲಿ ಏರುಪೇರಾಗಿದ್ದು, ಪ್ರಕರಣದ ಸಾಕ್ಷಿಯಾಗಿ ಕೋರ್ಟ್ಗೆ ವೈಯಕ್ತಿಕವಾಗಿ ಹಾಜರಾಗುಲು ನನಗೆ ವಿನಾಯಿತಿ ಕೋಡಬೇಕೆಂದು 82 ವರ್ಷದ ದಯಾಲು ಅಮ್ಮಲ್ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಮೂರ್ತಿ ಜಿ.ಎಸ್ ಸಿಂಗ್ವಿ ಮತ್ತು ಕೆ.ಎಸ್ ರಾಧಕೃಷ್ಣನ್ ಅವನ್ನೋಳಗೊಂಡ ನ್ಯಾಯಾಪೀಠ ಅರ್ಜಿಯನ್ನು ವಜಾಗೊಳಿಸಿದೆ. ದಯಾಲು ಅಮ್ಮಾಲ್ ಅವರು ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಹಾಜರಾಗುವ ಅಗತ್ಯವಿಲ್ಲ. ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿರುವ ಚೆನ್ನೈನಲ್ಲಿರುವ ಆಯೋಗ ದಯಾಲು ಅವರನ್ನು ವಿಚಾರಣೆಗೊಳಪಡಿಸುತ್ತಾರೆ. ಆದ್ದರಿಂದ ಅವರು ನ್ಯಾಯಾಲಯಕ್ಕೆ ಬರುವ ಅಗತ್ಯವಿಲ್ಲ ಎಂದು ಪೀಠ ಹೇಳಿದೆ.
ದಯಾಲು ಅವರಿಗೆ ವಿನಾಯಿತಿ ನೀಡುವ ಪ್ರಶ್ನೆಯೇ ಇಲ್ಲ. ಅವರನ್ನು ವಿಚಾರಣೆ ಮಾಡಲೆಂದೇ ಚೆನ್ನೈನಲ್ಲಿ ಆಯೋಗ ನೇಮಕ ಮಾಡಲಾಗಿದೆ. ಅಲ್ಲಿ ಅವರು ವಿಚಾರಣೆಗೆ ಸಹಕರಿಸಬೇಕು ಎಂದು ಪೀಠ ಹೇಳಿದೆ.
ಅಮ್ಮಾಲ್ ಅವರು, 200 ಕೋಟಿ ಲಂಚ ಪಡೆದಿರುವ ಆರೋಪ ಹೊತ್ತಿರುವ ಕಲೈಗ್ನಾರ್ ಟಿವಿ ಪ್ರೈ.ಲಿ. ನಿರ್ದೇಶಕಿಯಾದ್ದರಿಂದ ಅವರು ಪ್ರಕರಣದ ಮುಖ್ಯ ಸಾಕ್ಷಿಯಾಗುತ್ತಾರೆ ಎಂದು ಸಿಬಿಐ ಹೇಳಿತ್ತು. ಟಿವಿ ಚಾನೆಲ್ನ ನಿರ್ದೇಶಕಿಯಾಗಿರುವ ಅಮ್ಮಾಲ್ ಅವರು ಶೇ.60ರಷ್ಟು ಪಾಲು ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಪ್ರಕರಣದ ಮುಖ್ಯ ಸಾಕ್ಷಿಯನ್ನಾಗಿ ಪರಿಗಣಿಸಿಲಾಗಿದೆ.