ಚಿತ್ರದುರ್ಗಾದಲ್ಲಿ ಡಿಆರ್ಡಿಓ ಯೋಜನೆಗೆ ತಡೆ
ಚೆನ್ನೈ: ಕರ್ನಾಟಕದ ಚಿತ್ರದುರ್ಗಾ ಜಿಲ್ಲೆಯಲ್ಲಿ ಕೈಗೊಳ್ಳಬೇಕಾಗಿದ್ದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಓ) ಯೋಜನೆಗೆ ರಾಷ್ಟ್ರೀಯ ಹಸಿರು ಪೀಠ ಗುರುವಾರ ತಡೆ ನೀಡಿದೆ.
ಚಿತ್ರದುರ್ಗಾದಲ್ಲಿ ಡಿಆರ್ಡಿಓ ಯೋಜನೆಯಾದ ವೈಮಾನಿಕ ಪರೀಕ್ಷಾ ಕೇಂದ್ರ ನಿರ್ಮಾಣಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯದೇ ಇದ್ದ ಕಾರಣ ರಾಷ್ಟ್ರೀಯ ಹಸಿರು ಪೀಠ ಯೋಜನೆಗೆ ತಡೆ ಹಾಕಿದೆ.
ಚಿತ್ರದುರ್ಗಾದಲ್ಲಿ ರೈತರ ಜಮೀನನಲ್ಲಿ ಪರೀಕ್ಷಾ ಕೇಂದ್ರವನ್ನು ನಿರ್ಮಿಸಲು ಮುಂದಾಗಿದೆ. ಆದ್ದರಿಂದ ಇದಕ್ಕೆ ತಡೆ ನೀಡಿ ಎಂದು ಕೋರಿ ಬೆಂಗಳೂರಿನ ಪರಿಸರ ಹೋರಾಟಗಾರರೊಬ್ಬರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ದಕ್ಷಿಣ ವಲಯದ ಹಸಿರು ನ್ಯಾಯಾಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.