ಡಾಲರ್ ಎದುರು ಮತ್ತೆ ಕುಸಿದ ರುಪಾಯಿ ಮೌಲ್ಯ
ರುಪಾಯಿಯ ಮಹಾಪತನ ಮುಂದುವರೆದಿದ್ದು, ಡಾಲರ್ ಎದುರು ರುಪಾಯಿ ಮತ್ತೆ ಅಪಮೌಲ್ಯ..
ಮುಂಬೈ: ರುಪಾಯಿಯ ಮಹಾಪತನ ಮುಂದುವರೆದಿದ್ದು, ಡಾಲರ್ ಎದುರು ರುಪಾಯಿ ಮತ್ತೆ ಅಪಮೌಲ್ಯಗೊಂಡಿದೆ. ಗುರುವಾರ ಪ್ರತಿ ಡಾಲರ್‌ಗೆ 65.12 ರುಪಾಯಿಗೆ ಕುಸಿದಿದೆ.
ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತದಂತೆಯೇ ರುಪಾಯಿ ಮೌಲ್ಯ ಸರ್ವಕಾಲಿಕ ದಾಖಲೆಯ 65.12ಕ್ಕೆ ಕುಸಿಯಿತು. ಡಾಲರ್ ಎದುರು ರುಪಾಯಿ ಈ ರೀತಿ ಸತತ ಕುಸಿತ ದಾಖಲಿಸುತ್ತಿರುವುದು ಇದು ಆರನೇ ಬಾರಿ. ನಿನ್ನೆ ಬೆಳಗ್ಗೆ 63.45 ತಲುಪಿದ್ದ ರುಪಾಯಿ ಮೌಲ್ಯ ದಿನದ ಅಂತ್ಯದ ವೇಳೆ ಆರ್‌ಬಿಐನ ಮಧ್ಯಪ್ರದೇಶದ ಭರವಸೆಯೊಂದಿಗೆ ಸ್ವಲ್ಪ ಚೇತರಿಕೆ ಕಂಡು 64.11ರಲ್ಲಿ ಸ್ಥಿರವಾಗಿತ್ತು. ಆದರೆ ಇಂದು ಡಾಲರ್‌ಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಮತ್ತೆ ರುಪಾಯಿ ಮೌಲ್ಯ ಕಳೆದುಕೊಂಡಿತು.
ಅಮೆರಿಕ, ಯುರೋಪ್ ಮತ್ತು ಜಪಾನ್ ಮಾರುಕಟ್ಟೆಯ ಚೇತರಿಕೆಯಿಂದಾಗಿ ಹೂಡಿಕೆದಾರರು ಅತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಹೂಡಿಕೆದಾರರು ಭಾರತದಿಂದ ತಮ್ಮ ಹೂಡಿಕೆಯನ್ನು ಹಿಂತೆಗೆದುಕೊಂಡು ಅಮೆರಿಕ ಮತ್ತು ಜಪಾನ್‌ನಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಡಾಲರ್‌ಗಾಗಿ ಬೇಡಿಕೆ ಹೆಚ್ಚುತ್ತಿದೆ.