ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಜ್ಯಸಭಾ ಸ್ಥಾನಕ್ಕೆ ಟಿಡಿಪಿಯ ಎನ್. ಹರಿಕೃಷ್ಣ ರಾಜಿನಾಮೆ

Mainashree
Updated On : 22 Aug 2013, 4:03 am

ನವದೆಹಲಿ: ದಿವಂಗತ ಎನ್. ಟಿ. ರಾಮ್ ರಾವ್ ಅವರ ಮಗ ಹಾಗೂ ತೆಲಗು ದೇಶಂ ಪಕ್ಷ(ಟಿಡಿಪಿ)ದ ಸಂಸದರಾಗಿದ್ದ ಎನ್ ಹರಿಕೃಷ್ಣ ಅವರು ರಾಜ್ಯಸಭಾ ಸ್ಥಾನಕ್ಕೆ ಗುರುವಾರ ರಾಜಿನಾಮೆ ನೀಡಿದ್ದಾರೆ.

57 ವರ್ಷದ ಹರಿಕೃಷ್ಣ ಅವರು ಇಂದು ಬೆಳಿಗ್ಗೆ ರಾಜ್ಯಸಭಾ ಅಧ್ಯಕ್ಷ ಎಂ ಹಮೀದ್ ಅನ್ಸಾರಿ ಅವರನ್ನು ಭೇಟಿ ಮಾಡಿ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.

ಇಂದು ಹರಿಕೃಷ್ಣ ಅವರ ರಾಜಿನಾಮೆಯನ್ನು ಅಂಗೀಕರಿಸಲಾಗಿದೆ ಎಂದು ರಾಜ್ಯಸಭಾ ಉಪಸಭಾಪತಿ ಪಿ ಜೆ ಕುರಿಯನ್ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಆಂಧ್ರ ವಿಭಜನೆ ಮಾಡಿ, ರಾಜಕೀಯ ತಂತ್ರ ಹೂಡಿದೆ ಎಂದು ಹರಿಕೃಷ್ಣ ಆಪಾದಿಸಿದ್ದಾರೆ.

ಆಂಧ್ರವನ್ನು ವಿಭಜಿಸಿ ತೆಲಗು ಜನರ ಉತ್ಸಾಹವನ್ನು ಕಾಂಗ್ರೆಸ್ ಸರ್ಕಾರ ಕುಗ್ಗಿಸಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡುವ ಉದ್ದೇಶದಿಂದ ಅವರು ಈ ತಂತ್ರ ಬಳಸಿದ್ದಾರೆ ಎಂದು ಹರಿಕೃಷ್ಣ ದೂರಿದ್ದಾರೆ.

ಸಂಯುಕ್ತ ಆಂಧ್ರ ರಾಜ್ಯಕ್ಕಾಗಿ ನಮ್ಮ ತಂದೆ ದುಡಿದಿದ್ದರು, ಆದರೆ ಇಂದು ಅವರ ಕನಸು ನುಚ್ಚು ನೂರಾಗಿದೆ. ಯುಪಿಎ ಸರ್ಕಾರದ ನಿಲುವು ಬೇಸರ ತಂದಿದೆ. ಆದ್ದರಿಂದ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement