ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

2ಜಿ ಹಗರಣ: ನ್ಯಾಯಾಲಯಕ್ಕೆ ಹಾಜರಾದ ಟೀನಾ ಅಂಬಾನಿ

2ಜಿ ಸ್ಪೆಕ್ಟ್ರಾಂ ಪ್ರಕರಣಕ್ಕೆ ಸಂಭಂಧಿಸಿದಂತೆ ರಿಲಯನ್ಸ್ ನ ಎಡಿಎಜಿ ಅಧ್ಯಕ್ಷ ಅನಿಲ್ ಅಂಬಾನಿ ಅವರ ಪತ್ನಿ ಟೀನಾ ಅಂಬಾನಿ ಅವರು...

Mainashree
Updated On : 23 Aug 2013, 2:23 am

ನವದೆಹಲಿ: 2ಜಿ ಸ್ಪೆಕ್ಟ್ರಾಂ ಪ್ರಕರಣಕ್ಕೆ ಸಂಭಂಧಿಸಿದಂತೆ ರಿಲಯನ್ಸ್ ನ ಎಡಿಎಜಿ ಅಧ್ಯಕ್ಷ ಅನಿಲ್ ಅಂಬಾನಿ ಅವರ ಪತ್ನಿ ಟೀನಾ ಅಂಬಾನಿ ಅವರು ಶುಕ್ರವಾರ ವಿಚಾರಣೆ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ವಿಚಾರಣೆ ಸಾಕ್ಷಿಯಾಗಿ ಇಂದು ಹಾಜರಾಗಬೇಕು ಎಂದು ಟೀನಾ ಅಂಬಾನಿ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನಲೆಯಲ್ಲಿ ಟೀನಾ ಅವರು ಇಂದು ನ್ಯಾಯಾಲಕ್ಕೆ ಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೆ ಅನಿಲ್ ಅಂಬಾನಿ ಅವರು ನ್ಯಾಯಾಲಯಕ್ಕೆ ವಿಚಾರಣೆ ಸಾಕ್ಷಿಯಾಗಿ ಹಾಜರಾಗಿದ್ದರು. ಆದರೆ ನಿನ್ನೆ ನ್ಯಾಯಾಲಯದಲ್ಲಿ ಅಂಬಾನಿ ಅವರು ನಾನು ಅನೇಕ ಸಭೆಗಳಿಗೆ ಹಾಜರಾಗಿದ್ದೇನೆ. ಅವು ಯಾವುದು ನನಗೆ ನೆನಪಿಲ್ಲ. ದಾಖಲೆಗಳ ಮೂಲಕ ನಾನು ವಿಚಾರಣೆಗೆ ಸಹಕರಿಸುತ್ತಿದ್ದೇನೆ. ದಾಖಲೆಗಳಲ್ಲಿರುವುದೇ ಸತ್ಯವಾಗಿರಬಹುದು, ಈ ದಾಖಲೆಗಳನ್ನು ನನ್ನ ಕಂಪನಿ ಸಿಬ್ಬಂದಿಗಳ ರಚಿಸಿರುವುದರಿಂದ ನನಗೆ ಹೆಚ್ಚಿನ ಮಟ್ಟಿಗೆ ಸಭೆಯ ಬಗ್ಗೆ ನೆನಪಿಲ್ಲ ಎಂದು ಹೇಳಿ ಮಾತು ತಿರುಚಿದ್ದರು.

ಈ ಹಿನ್ನಲೆಯಲ್ಲಿ ಸಿಬಿಐ, ಪ್ರಕರಣದ ತನಿಖೆಗೆ ಅನಿಲ್ ಅಂಬಾನಿ ಅವರು ಸರಿಯಾಗಿ ಸಹಕರಿಸುತ್ತಿಲ್ಲ. ಆದ್ದರಿಂದ ಅವರನ್ನು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಿ ಎಂದು ಸಿಬಿಐ ದೆಹಲಿ ಹೈಕೋರ್ಟ್ಗೆ ಮನವಿ ಮಾಡಿತ್ತು.

ಹಗರಣಕ್ಕೆ ಸಂಬಂಧಿಸಿದಂತೆ ಅನಿಲ್ ಹಾಗೂ ಟೀನಾ ಅವರನ್ನು ಪ್ರಾಸಿಕ್ಯೂಷನ್ ಪರ ಸಾಕ್ಷಿಯನ್ನಾಗಿಸಬೇಕು ಎಂಬ ಸಿಬಿಐ ಮನವಿಗೆ ನ್ಯಾಯಾಲಯ ಒಪ್ಪಿಗೆ ನೀಡಿತ್ತು. ತದ ನಂತರ ವೈಯಕ್ತಿಕ ಕಾರಣಗಳಿಂದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುವುದಕ್ಕೆ ವಿನಾಯಿತಿ ಕೊಡಿ ಎಂದು ಅನಿಲ್ ಅಂಬಾನಿ ಮತ್ತು ಟೀನಾ ಅಂಬಾನಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಆಗಸ್ಟ್ 22ರಂದು ಅನಿಲ್ ಅಂಬಾನಿ ಹಾಗೂ ಆಗಸ್ಟ್ 23ರಂದು ಟೀನಾ ಅಂಬಾನಿ ಅವರು ವಿಚಾರಣೆ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement