70 ವಿಶ್ವ ಹಿಂದೂ ಪರಿಷತ್ ನಾಯಕರ ವಿರುದ್ಧ ಬಂಧನ ವಾರೆಂಟ್ ಜಾರಿ
ಲಖನೌ/ಗಾಝಿಯಾಬಾದ್: ಕೋಸಿ ಯಾತ್ರೆ ನಡೆಸಲು ಮುಂದಾಗಿರುವ ವಿಶ್ವ ಹಿಂದೂ ಪರಿಷತ್(ವಿಎಚ್ಪಿ)ನ 70 ನಾಯಕರ ವಿರುದ್ಧ ಶುಕ್ರವಾರ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ.
ಉತ್ತರ ಪ್ರದೇಶ ಸರ್ಕಾರ ನಿಷೇಧ ಹೇರಿದ್ದರೂ ಆಯೋಧ್ಯೆಯಲ್ಲಿ ಆಗಸ್ಟ್ 25ರಿಂದ 84 ಕಿ.ಮೀ. ಯಾತ್ರೆಯನ್ನು ಆರಂಭಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಹೇಳಿದ್ದು, ರಾಜ್ಯ ಸರ್ಕಾರ ಆಯೋಧ್ಯೆಯಲ್ಲಿ ಬಿಗಿ ಭದ್ರತೆ ಒದಗಿಸಿದೆ.
ಈ ಸಂಬಂಧ ಇಂದು ಭದ್ರತಾ ಸಿಬ್ಬಂದಿಗಳು ಪಥಸಂಚಲನ ನಡೆಸಿದ್ದು, ವಿಎಚ್ಪಿ ಮುಖ್ಯಸ್ಥ ಅಶೋಕ್ ಸಿಂಘಾಲ್, ರಾಮ್ ವಿಲಾಸ್ ವೇದಂತಿ ಮತ್ತು ಪ್ರವಿನ್ ಟೊಗಡಿಯಾ ಸೇರಿದಂತೆ 70 ನಾಯಕರ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ.
ವಿಶೇಷ ಪೊಲೀಸ್ ಪ್ರಧಾನ ನಿರ್ದೇಶಕ ಅರುಣ್ ಕುಮಾರ್ ನೇತೃತ್ವದ ಹಿರಿಯ ಅಧಿಕಾರಿಗಳು ಫಾಝಿಯಾಬಾದ್ನಲ್ಲಿ ಬಿಡೂರಿದ್ದು, ಪೂರ್ಣ ಭದ್ರತೆ ನೀಡಲಾಗಿದೆ. ವಿಎಚ್ಪಿ ನಾಯಕರ ಮನೆ ಮೇಲೆ ದಾಳಿ ಮಾಡುತ್ತಿರುವ ಪೊಲೀಸರು ಈಗಾಗಲೇ ಆಯೋಧ್ಯೆಗೆ ಹಾಜರಾಗಿರುವ ವಿಎಚ್ಪಿ ನಾಯಕರನ್ನು ಬಂಧಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.