ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಯಾತ್ರೆ ನಿಷೇದಾಜ್ಞೆ ಬಗ್ಗೆ ಪುನರ್ ಪರಿಶೀಲಿಸಿ: ರಾಜನಾಥ್ ಸಿಂಗ್

Mainashree
Updated On : 23 Aug 2013, 3:31 am

ಲಖನೌ: ವಿಶ್ವ ಹಿಂದೂ ಪರಿಷತ್‌ಯ(ವಿಎಚ್‌ಪಿ) ಯಾತ್ರೆಗೆ ಹೇರಲಾಗಿರುವ ನಿಷೇಧಾಜ್ಞೆ ಬಗ್ಗೆ ಪುನರ್‌ಪರಿಶೀಲಿಸಿ ಎಂದು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಶುಕ್ರವಾರ ಉತ್ತರ ಪ್ರದೇಶದ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಯಾತ್ರೆ ನಡೆಸುವ ಸಾಧು ಸಂತರು ರಾಜ್ಯದಲ್ಲಿ ಯಾವ ರೀತಿ ಅಪಾಯ ಉಂಟುಮಾಡುತ್ತಾರೆ? ದೌರ್ಜನ್ಯ, ಹಿಂಸಾಚಾರದಿಂದ ದೂರ ಉಳಿದಿರುವ ಸಾಧ ಸಂತರು ಯಾವುದೇ ಅಪಾಯಕಾರಿ ಕೆಲಸಗಳಿಗೆ ಕೈ ಹಾಕುವುದಿಲ್ಲ. ಇದರ ಬಗ್ಗೆ ಉತ್ತರ ಪ್ರದೇಶದ ಸರ್ಕಾರ ಚಿಂತಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ನಿರ್ಷೇದಾಜ್ಞೆಗೆ ಒದಗಿಸಿರುವ ಭದ್ರತೆಯನ್ನೇ ವಿಶ್ವ ಹಿಂದೂ ಪರಿಷತ್ ಯಾತ್ರೆಗೆ ಬಳಸಿಕೊಂಡಿದ್ದರೆ, ಈಗಾಗಲೇ ಶಾಂತಿಯುತವಾಗಿ ಯಾತ್ರೆ ಮುಗಿದಿರುತ್ತಿತ್ತು. ವಿನಾಕಾರಣ ಉತ್ತರ ಪ್ರದೇಶದ ಸರ್ಕಾರ ನಿಷೇಧಾಜ್ಞೆ ಜಾರಿ ಮಾಡಿದೆ ಎಂದು ರಾಜನಾಥ್ ತಿಳಿಸಿದ್ದಾರೆ.

ರಾಮ ಮಂದಿರ ನಿರ್ಮಾಣ ಬೆಂಬಲಿಸಿ ವಿಶ್ವ ಹಿಂದೂ ಪರಿಷತ್ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಆದರೆ ರಾಜ್ಯ ಸರ್ಕಾರ ಅಯೋಧ್ಯೆಯಲ್ಲಿ ಯಾವುದೇ ಯಾತ್ರೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದು, 6 ಜಿಲ್ಲೆಗಳ ಸರಹದ್ದುಗಳನ್ನು ಬಂದ್ ಮಾಡಿದೆ.

ಆದರೆ ಯಾತ್ರೆ ನಡೆಸಿಯೇ ತೀರುವುದಾಗಿ ಪಟ್ಟು ಹಿಡಿದಿರುವ ವಿಎಚ್‌ಪಿ ಅಯೋಧ್ಯೆಗೆ ತೆರಳುವುದಾಗಿ ಹೇಳಿದೆ. ಒಂದು ವೇಳೆ ರಾಜ್ಯ ಸರ್ಕಾರ ಪ್ರತಿರೋಧ ಒಡ್ಡಿದರೆ ಕೋರ್ಟ್ ಅರೆಸ್ಟ್ ಆಗುವುದಾಗಿ ಸ್ಪಷ್ಟವಾಗಿ ಹೇಳಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement