ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಿವಾಹ ಅಸಿಂಧುಗೆ ಅಭ್ಯಂತರವಿಲ್ಲ: ನಟಿ ಶೃತಿ

ಪತ್ರಕರ್ತ ಚಂದ್ರಚೂಡ್ ಅವರೊಂದಿಗೆ ನಡೆದ ತಮ್ಮ ಎರಡನೇ ಮದುವೆಯನ್ನು ಅಸಿಂಧುಗೊಳಿಸುವ..

Lingaraj Badiger
Updated On : 23 Aug 2013, 1:46 am

ಬೆಂಗಳೂರು: ಇತ್ತೀಚಿಗೆ ಪತ್ರಕರ್ತ ಚಂದ್ರಚೂಡ್ ಅವರೊಂದಿಗೆ ನಡೆದ ತಮ್ಮ ಎರಡನೇ ಮದುವೆಯನ್ನು ಅಸಿಂಧುಗೊಳಿಸುವ ಬಗ್ಗೆ ತಮ್ಮಿಂದ ಯಾವುದೇ ಅಭ್ಯಂತರವಿಲ್ಲ ಎಂದು ನಟಿ ಶೃತಿ ಶುಕ್ರವಾರ ಹೇಳಿದ್ದಾರೆ.

ಚಂದ್ರಚೂಡ್ ಜತೆಗಿನ ವಿವಾಹ ರದ್ದು ವಿಚಾರವಾಗಿ ಇಂದು ಕೋರ್ಟ್‌ಗೆ ಹಾಜರಾದ ಶೃತಿ, ವಿವಾಹ ಅಸಿಂಧುಗೊಳಿಸಲು ತಮ್ಮ ಅಭ್ಯಂತರವಿಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.

ವಿಚಾರಣೆಗೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೃತಿ, ವಿವಾಹ ರದ್ದು ವಿಚಾರವಾಗಿ ಕೋರ್ಟ್‌ಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಮಂಜುಳಾ ಅವರು ಚಂದ್ರಚೂಡ್ ಅವರ ಮೊದಲ ಪತ್ನಿ ಎಂಬುದು ನನ್ನ ಗಮನಕ್ಕೆ ಬಂದಿರಲಿಲ್ಲ ಮತ್ತು ಮಂಜುಳಾ ಆರೋಪಗಳೆಲ್ಲ ಸುಳ್ಳು ಎಂದು ಶೃತಿ ಹೇಳಿದ್ದಾರೆ.

ನಾನು ಒಂದು ಹೆಣ್ಣಾಗಿರುವುದರಿಂದ ಮತ್ತೊಂದು ಹೆಣ್ಣಿಗೆ ಮೋಸವಾಗುವುದನ್ನು ಸಹಿಸುವುದಿಲ್ಲ. ನಮ್ಮ ಎರಡನೇ ವಿವಾಹದ ವಿವಾದದಲ್ಲಿ ಮಂಜುಳಾಗೆ ಸಿಗಬೇಕಾದ ನ್ಯಾಯ ಸಿಗುತ್ತದೆ. ಚಂದ್ರಚೂಡ್-ಮಂಜುಳಾ ವೈವಾಹಿಕ ಜೀವನದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಶೃತಿ ಸ್ಪಷ್ಟಪಡಿಸಿದ್ದಾರೆ.

ಶೃತಿ-ಚಂದ್ರಚೂಡ್ ವಿವಾಹ ರದ್ದು ಕೋರಿ ಮಂಜುಳಾ ಅವರು ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್, ಈ ಸಂಬಂಧ ಶೃತಿ ಹಾಗೂ ಚಂದ್ರಚೂಡ್ ಅವರಿಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಶೃತಿ ಇಂದು ಕೋರ್ಟ್‌ಗೆ ಹಾಜರಾದರು. ವಿಚಾರಣೆಯನ್ನು ಕೋರ್ಟ್ ಆ.29ಕ್ಕೆ ಮುಂದೂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement