ಗ್ಯಾಂಗ್‌ರೇಪ್: 2ನೇ ಆರೋಪಿ ತಪ್ಪೊಪ್ಪಿಗೆ
22ರ ಹರೆಯದ ಪತ್ರಿಕಾ ಛಾಯಾಗ್ರಾಹಕಿಯನ್ನು ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದಲ್ಲಿ ಬಂಧಿಸಲಾಗಿರುವ ವ್ಯಕ್ತಿಗಳಲ್ಲಿ...
ಮುಂಬೈ: 22ರ ಹರೆಯದ ಪತ್ರಿಕಾ ಛಾಯಾಗ್ರಾಹಕಿಯನ್ನು ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದಲ್ಲಿ ಬಂಧಿಯಾಗಿರುವ ವ್ಯಕ್ತಿಗಳಲ್ಲಿ 2ನೇ ಆರೋಪಿ ವಿಜಯ್ ಜಾಧವ್ ಶನಿವಾರ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಆದಾಗ್ಯೂ, ಪ್ರಥಮ ಆರೋಪಿ ಚಾಂದ್ ಬಾಬು ಸತ್ತಾರ್ ಶೇಖ್ ಅಲಿಯಾಸ್ ಮೊಹಮ್ಮದ್ ಅಬ್ದುಲ್ (19) ನ್ನು ಅತ್ಯಾಚಾರ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿತ್ತು. ಈತನನ್ನು ಶನಿವಾರ ಬೊಯಿವಾಡಾ ಮೆಡಿಸ್ಟ್ರೇಟ್ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ. ಇದೀಗ ಚಾಂದ್ ಬಾಬು ಸತ್ತಾರ್ ಶೇಖ್ ನ್ನು ಅಗಸ್ಟ್ 30ರ ವರೆಗೆ ಪೊಲೀಸ್ ಬಂಧನದಲ್ಲಿರಿಸಲಾಗಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಂಬೈ ಪೊಲೀಸ್ ಕಮಿಷನರ್ ಸತ್ಯಪಾಲ್ ಸಿಂಗ್, ಪ್ರಕರಣದ ಎರಡನೇ ಆರೋಪಿ ತಪ್ಪೊಪ್ಪಿಕೊಂಡಿದ್ದು, ಇನ್ನು ಮೂವರು ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಅತ್ಯಾಚಾರ ಪ್ರಕರಣದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ಘಟನೆ ನಡೆಯಬಾರದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.