ಮುಂಬೈ ಗ್ಯಾಂಗ್‌ರೇಪ್ ಆರೋಪಿ ಬಾಲಾಪರಾಧಿ?
ಪತ್ರಿಕಾ ಛಾಯಾಗ್ರಾಹಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಪ್ರಥಮ ಆರೋಪಿ ಬಾಲಾಪರಾಧಿ ಎಂದು ಆತನ...
ಮುಂಬೈ: ಪತ್ರಿಕಾ ಛಾಯಾಗ್ರಾಹಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಪ್ರಥಮ ಆರೋಪಿ ಬಾಲಾಪರಾಧಿ ಎಂದು ಆತನ ಕುಟುಂಬ ವಾದಿಸುತ್ತಿದೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಈತನನ್ನು ರಕ್ಷಿಸುವ ಸಲುವಾಗಿ ಚಾಂದ್ ಬಾಬು ಸತ್ತಾರ್ ಶೇಖ್ ಅಪ್ರಾಪ್ತ ಬಾಲಕ ಎಂದು ಆಕನ ಕುಟುಂಬದ ಸದಸ್ಯರು ಹೇಳುತ್ತಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಬಾಲಾಪರಾಧಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ.
ಪ್ರಸ್ತುತ ಪ್ರಕರಣದ ಪ್ರಥಮ ಆರೋಪಿ ಎಂದು ಪರಿಗಣಿಸಲ್ಪಟ್ಟಿರುವ ಚಾಂದ್ ಬಾಬು ಸತ್ತಾರ್ ಶೇಖ್ ಅಲಿಯಾಸ್ ಮೊಹಮ್ಮದ್ ಅಬ್ದುಲ್‌ನ ಅಜ್ಜಿ ಸರ್ನಾಭಾಯಿ, ನಿನ್ನೆ ಪೊಲೀಸರಿಗೆ ಜನ್ಮದಿನಾಂಕದ ದಾಖಲೆ ಸಲ್ಲಿಸಿದ್ದರು. ಅದರಲ್ಲಿ ಚಾಂದ್ ಬಾಬುವಿನ ಜನ್ಮ ದಿನಾಂಕ ಫೆ. 26, 1997 ಎಂದು ಸೂಚಿಸಲಾಗಿತ್ತು.
ಆದರೆ ಚಾಂದ್‌ಗೆ 19 ವರ್ಷ ದಾಟಿದೆ ಎಂದು ಪೊಲೀಸರು ವಾದಿಸುತ್ತಿದ್ದಾರೆ. ಹೆಚ್ಚಿನ ಶಿಕ್ಷೆಯಿಂದ ಆತನನ್ನು ಪಾರು ಮಾಡುವುದಕ್ಕಾಗಿ ಆತನ ಕುಟುಂಬ ಈ ರೀತಿ ನಕಲಿ ದಾಖಲೆಗಳನ್ನು ಸಲ್ಲಿಸಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಏತನ್ಮಧ್ಯೆ, ಚಾಂದ್ ತುಂಬಾ ಒಳ್ಳೆ. ಹುಡುಗ, ಅವನು ಇಂಥಾ ಕೆಲಸ ಮಾಡಲು ಸಾಧ್ಯವಿಲ್ಲ. ಅವನಿಗೆ ಈಗ ಕೇವಲ 16 ವರ್ಷ. ಅವನ ವಯಸ್ಸು ಎಷ್ಟೆಂದು ಸಾಬೀತು ಪಡಿಸಲು ನಾನು ದಾಖಲೆಯನ್ನು ತಂದಿದ್ದೇನೆ ಎಂದು ಮಾಧ್ಯಮದವರಲ್ಲಿ ಮಾತನಾಡಿದ ಸರ್ನಾಬಾಯಿ ಹೇಳಿದ್ದಾರೆ.
ಆದರೆ ಚಾಂದ್ ಒಬ್ಬ ಕಳ್ಳ, ಕುಡುಕ ಮತ್ತು ಮಾದಕ ವಸ್ತು ವ್ಯಸನಿಯಾಗಿದ್ದ ಎಂದು ಆತನ ನೆರೆಹೊರೆಯವರು ಹೇಳುತ್ತಿದ್ದಾರೆ.