ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಂಬೈನಲ್ಲಿ ಗ್ಯಾಂಗ್‌ರೇಪ್: ಎಲ್ಲಾ ಐದು ಆರೋಪಿಗಳ ಬಂಧನ

ಛಾಯಗ್ರಾಹಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಐದು ಆರೋಪಿಗಳನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ...

Mainashree
Updated On : 25 Aug 2013, 2:18 am

ಮುಂಬೈ: ಛಾಯಗ್ರಾಹಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಐದು ಆರೋಪಿಗಳನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

ಮುಂಬೈನಲ್ಲಿ ಛಾಯಾಗ್ರಾಹಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಐದು ಆರೋಪಿಗಳಲ್ಲಿ ಒಬ್ಬ ತಲೆಮರೆಸಿಕೊಂಡಿದ್ದನು. ಆದರೆ ಇಂದು ಐದನೇ ಆರೋಪಿ ಸಲೀಂ ಅನ್ಸಾರಿ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.

ಐದನೇ ಆರೋಪಿ ಸಲೀಂ ಅನ್ಸಾರಿ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದನು. ಅಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು ಮುಂಬೈಗೆ ಕರೆತರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ ಈ ಹಿಂದೆ ನಾಲ್ಕು ಆರೋಪಿಗಳ ಬಂಧಿಸಲಾಗಿತ್ತು. ಕಳೆದ ರಾತ್ರಿ ಕಾಸಿಮ್ ಬೆಂಗಾಲಿ ಎಂಬ ಆರೋಪಿ ಐವರಲ್ಲಿ ಹಿರಿಯನಾಗಿದ್ದು, ಯುವತಿಯ ಮೇಲೆ ಎರಡು ಬಾರಿ ಅತ್ಯಾಚಾರಿವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನಿನ್ನೆ ಮುಂಬ್ರಾ ಪ್ರದೇಶದಲ್ಲಿ ಮೂರನೇ ಆರೋಪಿಯಾದ 25 ವರ್ಷದ ಸಿರಜ್ ರೆಹಮಾನ್ ಎಂಬುವವನ್ನು ಪೊಲೀಸರು ಬಂಧಿಸಿದ್ದರು.

ಬಂಧನಕ್ಕೊಳಗಾದ ನಾಲ್ಕನೇ ಆರೋಪಿ ವಿಜಯ್ ಜಾದವ್ ಎಂಬುವವನು ಅತ್ಯಾಚಾರವೆಸಗಿರುವುದರ ಬಗ್ಗೆ ತಪ್ಪೋಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರೆಹಮಾನ್ ಮತ್ತು ಜಾದವ್‌ನನ್ನು ಆಗಸ್ಟ್ 30ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ.

ಮೊದಲ ಆರೋಪಿ ಚಂದ್ ಬಾಬು ಸತ್ತರ್ ಶೈಖ್ ಅಲಿಯಾಸ್ ಮೊಹಮದ್ ಅಬ್ದುಲ್(19) ಎಂಬುವವನನ್ನು ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿತ್ತು.

ಆಂಗ್ಲ ಮಾಸಿಕ ಪತ್ರಿಕೆಯ ಛಾಯಗ್ರಾಹಕಿ ಕಳೆದ ಗುರುವಾರ ಸಂಜೆ ವರದಿಗಾರಿಕೆಗಾಗಿ ಸಹೋದ್ಯೋಗಿಯ ಜೊತೆ ಛಾಯಾಗ್ರಾಹಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಸಹೋದ್ಯೋಗಿಯನ್ನು ಮಹಾಲಕ್ಷ್ಮೀ ಬಡಾವಣೆಯ ಶಕ್ತಿ ಮಿಲ್‌ನಲ್ಲಿ ಕಟ್ಟಿಹಾಕಿದ ದುಷ್ಕರ್ಮಿಗಳು ಯುವತಿ ಮೇಲೆ ಅತ್ಯಾಚಾರ ವೆಸಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement