ಮುಂಬೈ ಗ್ಯಾಂಗ್ ರೇಪ್: ಮತ್ತೋರ್ವ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಶಂಕೆ
ಮುಂಬೈ: ಛಾಯಗ್ರಾಹಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪಿಗಳು ಈ ಮುಂಚೆಯೇ ಮತ್ತೋರ್ವ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಸಾಧ್ಯತೆ ಇದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ನಿನ್ನೆ ಪ್ರಕರಣದ ಐದು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಡಪಡಿಸಿ ನೀಡುತ್ತಿದ್ದ ಹೇಳಿಕೆಗಳು, ಮತ್ತೋರ್ವ ಮಹಿಳೆ ಮೇಲೆ ಅತ್ಯಾಚಾರವೆಸಗಿರುವುದರ ಬಗ್ಗೆ ಉಂಟುಮಾಡಿದೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರ ಪ್ರಕಾರ ಆರೋಪಿಗಳು ಇದೇ ಮೊದಲ ಬಾರಿಗೆ ಅತ್ಯಾಚಾರವೆಸಗಿಲ್ಲ. ಈ ಮುಂಚೆಯೂ ಈ ಅಪರಾಧದಲ್ಲಿ ತೊಡಿಗಿದ್ದಾರೆ. ಆದರೆ ಇದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಪ್ರಕರಣದ ಕೆಲ ಆರೋಪಿಗಳ ಮೇಲೆ ಕಳ್ಳತನ ಪ್ರಕರಣಗಳು ದಾಖಲಾಗಿದೆ ಎಂದು ತಿಳಿದು ಬಂದಿದೆ.
ಆಂಗ್ಲ ಮಾಸಿಕ ಪತ್ರಿಕೆಯ ಛಾಯಗ್ರಾಹಕಿ ಕಳೆದ ಗುರುವಾರ ಸಂಜೆ ವರದಿಗಾರಿಕೆಗಾಗಿ ಸಹೋದ್ಯೋಗಿಯ ಜೊತೆ ಛಾಯಾಗ್ರಾಹಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಸಹೋದ್ಯೋಗಿಯನ್ನು ಮಹಾಲಕ್ಷ್ಮೀ ಬಡಾವಣೆಯ ಶಕ್ತಿ ಮಿಲ್ನಲ್ಲಿ ಕಟ್ಟಿಹಾಕಿದ ದುಷ್ಕರ್ಮಿಗಳು ಯುವತಿ ಮೇಲೆ ಅತ್ಯಾಚಾರವೆಸಗಿದ್ದರು.
ಚಂದ್ ಬಾಬು ಸತ್ತರ್ ಶೈಖ್ ಅಲಿಯಾಸ್ ಮೊಹಮದ್ ಅಬ್ದುಲ್(19), ವಿಜಯ್ ಜಾದವ್, ಸಿರಜ್ ರೆಹಮಾನ್, ಸಲೀಂ ಅನ್ಸಾರಿ ಮತ್ತು ಕಾಸಿಮ್ ಬೆಂಗಾಲಿ ಪ್ರಕರಣದ ಬಂಧಿತ ಆರೋಪಿಗಳು.