ಸಂಸತ್ ಮುಂಗಾರು ಅಧಿವೇಶನ ಸೆ.6ರ ವರೆಗೆ ವಿಸ್ತರಣೆ
ಸಂಸತ್‌ನಲ್ಲಿ ಮುಂಗಾರು ಅಧಿವೇಶನಕ್ಕೆ ಆಗಾಗ್ಗೆ ಭಂಗವುಂಟಾಗಿದ್ದರಿಂದ ಪ್ರಸ್ತುತ ಅಧಿವೇಶನವನ್ನು ಸೆಪ್ಟೆಂಬರ್ 6ರ ವರೆಗೆ ವಿಸ್ತರಣೆ...
ನವದೆಹಲಿ: ಸಂಸತ್‌ನಲ್ಲಿ ಮುಂಗಾರು ಅಧಿವೇಶನಕ್ಕೆ ಆಗಾಗ್ಗೆ ಭಂಗವುಂಟಾಗಿದ್ದರಿಂದ ಪ್ರಸ್ತುತ ಅಧಿವೇಶನವನ್ನು ಸೆಪ್ಟೆಂಬರ್ 6ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಈ ಅಧಿವೇಶನದಲ್ಲಿ ಆಹಾರ ಭದ್ರತೆ, ಆರ್ಥಿಕ ಸುಧಾರಣೆ, ಭೂ ಸ್ವಾಧೀನತೆ ಬಗ್ಗೆ ಮಸೂದೆಗಳು ಜಾರಿಯಾಗುವ ಸಾಧ್ಯತೆಗಳಿವೆ.
ಸಂಸದೀಯ ವ್ಯವಹಾರಗಳ ಸಮಿತಿ ಸೋಮವಾರ ಸಂಸತ್ ಭವನದಲ್ಲಿ ಸಭೆ ಸೇರಿ, ಅಧಿವೇಶನವನ್ನು ಸೆ.6ರ ವರೆಗೆ ವಿಸ್ತರಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿದೆ.
ಮುಂಗಾರು ಅಧಿವೇಶನವು ಆಗಸ್ಟ್ 5ರಂದು ಆರಂಭಗೊಂಡಿದ್ದು, ಆಗಸ್ಟ್ 31ಕ್ಕೆ ಮುಕ್ತಾಯವಾಗಬೇಕಿತ್ತು.