ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಲ್ಲಿದ್ದಲು ಹಂಚಿಕೆ ಪ್ರಕರಣ: ಕಾಣೆಯಾದ ಫೈಲ್‌ಗಾಗಿ ಶೋಧ ಶುರು

ಕಲ್ಲಿದ್ದಲು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದ ಫೈಲ್‌ಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಕಾಣೆಯಾದ ಫೈಲ್‌ಗಳಿಗಾಗಿ ಶೋಧ ಕಾರ್ಯ...

Rashmi Kasaragodu
Updated On : 27 Aug 2013, 6:37 am

ನವದೆಹಲಿ: ಕಲ್ಲಿದ್ದಲು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದ ಫೈಲ್‌ಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಕಾಣೆಯಾದ ಫೈಲ್‌ಗಳಿಗಾಗಿ ಶೋಧ ಕಾರ್ಯ ಆರಂಭವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.

ಏತನ್ಮಧ್ಯೆ, ಕಲ್ಲಿದ್ದಲು ಹಂಚಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಹೊಸ ಅಫಿಡವಿಟ್‌ನ್ನು ಸಲ್ಲಿಸಿದೆ.

ಕಲ್ಲಿದ್ದಲು ಹಂಚಿಕೆ ಪ್ರಕರಣದ ಬಗ್ಗೆ ವರದಿಯನ್ನು ತಮ್ಮ ನ್ಯಾಯವಾದಿಗಳೊಂದಿಗೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಸಿಬಿಐ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದೆ.

ಕಲ್ಲಿದ್ದಲು ಹಂಚಿಕೆ ಪ್ರಕರಣ ಫೈಲ್ ನಾಪತ್ತೆಯಾಗಿರುವುದರ ಬಗ್ಗೆ ವಿಪಕ್ಷಗಳು ಕೋಲಾಹಲವೆಬ್ಬಿಸುತ್ತಿರುವುದರಿಂದ ಲೋಕಸಭಾ ಕಲಾಪವೂ ಸ್ಥಗಿತಗೊಳ್ಳುತ್ತಿದೆ.

 ಆ ಕಾರಣದಿಂದಲೇ ಇದೀಗ ಕೇಂದ್ರ ಸರ್ಕಾರ ನಾಪತ್ತೆಯಾಗಿರುವ ಫೈಲ್‌ಗಳನ್ನು ಆದಷ್ಟು ಬೇಗ ಹುಡುಕಿ ತೆಗೆಯಲು ಯತ್ನಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement