ಗಗನಕ್ಕೇರಿದ ಚಿನ್ನದ ಬೆಲೆ
ಅಮೆರಿಕನ್ ಡಾಲರ್ ಮುಂದೆ ರುಪಾಯಿ ಮೌಲ್ಯ 65.93 ರಷ್ಟು ದಾಖಲೆ ಇಳಿಕೆ ಕಂಡಿರುವುದರಿಂದ ಮಂಗಳವಾರ ಚಿನ್ನದ ಬೆಲೆ 10 ಗ್ರಾಂಗೆ ...
ನವದೆಹಲಿ: ಅಮೆರಿಕನ್ ಡಾಲರ್ ಮುಂದೆ ರುಪಾಯಿ ಮೌಲ್ಯ 65.93 ರಷ್ಟು ದಾಖಲೆ ಇಳಿಕೆ ಕಂಡಿರುವುದರಿಂದ ಮಂಗಳವಾರ ಚಿನ್ನದ ಬೆಲೆ 10 ಗ್ರಾಂಗೆ ರು.32,677 ತಲುಪಿದೆ.
ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್) ನಲ್ಲಿ ಅಕ್ಟೋಬರ್ ತಿಂಗಳಿಗೆ ಬಟವಾಡೆ ಮಾಡಿದ ಚಿನ್ನದ ಬೆಲೆ 801 ರು. ಏರಿಕೆಗೊಂಡಿದೆ.
ಈ ಮೂಲಕ ಪ್ರಸ್ತುತ ಚಿನ್ನದ ಬೆಲೆ ರು. 32,677 ಆಗಿದ್ದು, ಇದು ದಾಖಲೆ ಬೆಲೆಯಾಗಿದೆ.
ಅದೇ ವೇಳೆ ಸೆಪ್ಟೆಂಬರ್ ತಿಂಗಳಿಗೆ ಬಟವಾಡೆ ಮಾಡಿದ ಬೆಳ್ಳಿ ಬೆಲೆಯಲ್ಲಿಯೂ ದಿಢೀರನೆ ಬೆಲೆ ಏರಿಕೆ ಕಾಣಿಸಿಕೊಂಡಿದೆ. ಬೆಳ್ಳಿ ಬೆಲೆ ರು. 1,488 ಏರಿಕೆ ಆಗಿದ್ದು, ಕೆ.ಜಿಗೆ 55, 275 ರು. ತಲುಪಿದೆ.