ವಿಹಿಂಪ ಯಾತ್ರೆ ಮುಂದುವರಿಯುವುದು: ತೊಗಾಡಿಯಾ
ಪೂರ್ವಯೋಜನೆಯಂತೆ ವಿಶ್ವ ಹಿಂದೂ ಪರಿಷತ್ತಿನ 84ನೇ ಕೋಸಿ ಯಾತ್ರೆ ಮುಂದುವರಿಯುವುದು ಎಂದು ವಿಹಿಂಪ ನಾಯಕ ಪ್ರವೀಣ್ ...
ಇಟಾ: ಪೂರ್ವಯೋಜನೆಯಂತೆ ವಿಶ್ವ ಹಿಂದೂ ಪರಿಷತ್ತಿನ 84ನೇ ಕೋಸಿ ಯಾತ್ರೆ ಮುಂದುವರಿಯುವುದು ಎಂದು ವಿಹಿಂಪ ನಾಯಕ ಪ್ರವೀಣ್ ತೊಗಾಡಿಯಾ ಮಂಗಳವಾರ ಹೇಳಿದ್ದಾರೆ.
ಪೂರ್ವಯೋಜನೆಯಂತೆ 84ನೇ ಕೋಸಿ ಯಾತ್ರೆ, ನಿಗದಿತ ಸಮಯಕ್ಕೆ, ನಿಗದಿತ ದಾರಿಯಲ್ಲಿ ಸಾಗಲಿದೆ ಈ ಬಗ್ಗೆ ಯಾವುದೇ ಬದಲಾವಣೆ ಇಲ್ಲ ಎಂದು ನಿನ್ನೆಯಷ್ಟೇ ಜೈಲಿನಿಂದ ತಾತ್ಕಾಲಿಕ ಬಿಡುಗಡೆ ಹೊಂದಿರುವ ತೊಗಾಡಿಯಾ ಹೇಳಿದ್ದಾರೆ.
ಆಗಸ್ಟ್ 25ರಂದು ಸರಯೂ ಘಾಟ್ನಲ್ಲಿ ಪೂಜೆ ಮಾಡಿದ ನಂತರ ಆರಂಭಗೊಂಡ ಈ ಯಾತ್ರೆಯನ್ನು ಶಾಂತಿಯುತವಾಗಿ ಮುಂದುವರಿಯಲು ಅನುವು ಮಾಡಿಕೊಡಬೇಕೆಂದು ಅವರು ಹೇಳಿದ್ದಾರೆ.
ಅದೇ ವೇಳೆ ಎಲ್ಲ ರಾಜಕೀಯ ಪಕ್ಷದ ಸಂಸದರು ಕೂಡಾ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಕಾನೂನೊಂದನ್ನು ಜಾರಿಗೊಳಿಸುವಂತೆ ಮಾಡಬೇಕೆಂದು ತೊಗಾಡಿಯಾ ವಿನಂತಿಸಿದ್ದಾರೆ.