ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಸಾರಾಮ್ ಬಾಪುವನ್ನು ಗಲ್ಲಿಗೇರಿಸಿ: ಬಾಲಕಿ ತಂದೆ ಆಗ್ರಹ

ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಧಾರ್ಮಿಕ ಗುರು ಅಸಾರಾಮ್ ಬಾಪುವನ್ನು ಗಲ್ಲಿಗೇರಿಸಬೇಕು ಎಂದು...

Mainashree
Updated On : 28 Aug 2013, 1:31 am

ನವದೆಹಲಿ: ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಧಾರ್ಮಿಕ ಗುರು ಅಸಾರಾಮ್ ಬಾಪುವನ್ನು ಗಲ್ಲಿಗೇರಿಸಬೇಕು ಎಂದು ಅಸಾರಾಮ್ ಬಾಪು ವಿರುದ್ಧ ದೂರು ದಾಖಲಿಸಿರುವ ಬಾಲಕಿಯ ತಂದೆ ಬುಧವಾರ ಆಗ್ರಹಿಸಿದ್ದಾರೆ.

ದೇವರ ಹೆಸರು ಹೇಳಿ ಸಾಮಾನ್ಯ ಜನರಿಗೆ ಮಂಕು ಬೂದಿ ಎಸೆಯುತ್ತಿರುವ ಅಸಾರಾಮ್ ಬಾಪುವನ್ನು ನೇಣಿಗೇರಿಸಬೇಕು. ನನ್ನ ಮಗಳಿಗೆ ಲೈಂಗಿಕ ದೌರ್ಜನ್ಯ ನೀಡಿದಲ್ಲದೇ, ವಿಷಯ ಬಹಿರಂಗ ಪಡಿಸಿದರೆ ಇಡೀ ಕುಟಂಬವನ್ನೇ ಹತ್ಯೆಗೈಯುವೇ ಎಂದು ಅಸಾರಾಮ್ ಬಾಪು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.

ನಾವು ಅಸಾರಾಮ್ ಬಾಪುವನ್ನು ದೇವರೆಂದು ಪೂಜಿಸುತ್ತಿದ್ದೇವು. ಆದರೆ ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವುದರ ಮೂಲಕ ತಾವು ಇಟ್ಟಿದ್ದ ನಂಬಿಕೆಗೆ ದ್ರೋಹ ಮಾಡಿದ್ದಾರೆ. ಅವರು ಈ ಕೃತ್ಯ ನಾಚಿಕೆಗೇಡಿನ ಸಂಗತಿ ಎಂದು ಬಾಲಕಿಯ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸಂಬಂಧ ತಾವು ಯಾವುದೇ ತನಿಖೆಗೆ ಸಿದ್ಧರಾಗಿದ್ದೇವೆ. ಸಿಬಿಐ ತನಿಖೆಗೂ ತಾವು ಸಿದ್ಧರಾಗಿದ್ದು, ಆರೋಪಿ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಲೈಂಕಿಗ ಕಿರುಕುಳ ನೀಡಿದ ಆರೋಪದ ಮೇಲೆ ಧಾರ್ಮಿಕ ಗುರು ಅಸಾರಾಮ್ ಬಾಪುಗೆ ಜೋಧ್‌ಪುರ್ ಪೊಲೀಸರು ಸೋಮವಾರ ಸಮನ್ಸ್ ಜಾರಿ ಮಾಡಿ, ನಾಲ್ಕು ದಿನದೊಳಗಾಗಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಜೋಧಪುರ್ ಪೊಲೀಸರು ತಿಳಿಸಿದ್ದರು.

ಆದರೆ ಪೊಲೀಸ್ ಠಾಣೆಗೆ ಹಾಜರಾಗಲು ಇನ್ನು ಹೆಚ್ಚು ದಿನಗಳ ಕಾಲವಕಾಶ ಬೇಕು ಎಂದು ಅಸಾರಾಮ್ ಬಾಪು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಜೋಧ್‌ಪುರದಲ್ಲಿ ಅಸಾರಾಮ್ ಟ್ರಸ್ಟ್ ನಡೆಸುತ್ತಿರುವ ಹಾಸ್ಟೆಲ್‌ನಲ್ಲಿರುವ 15 ವರ್ಷದ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಧಾರ್ಮಿಕ ಗುರು ಅಸಾರಾಮ್ ಬಾಪು ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದಳು. ರಾಜಸ್ಥಾನದಲ್ಲಿ ಜೀವ ಭಯವಿದ್ದುದ್ದರಿಂದ ಇಲ್ಲಿಗೆ ಬರಬೇಕಾಯಿತು ಎಂದು ಆಕೆಯ ತಂದೆ ಹೇಳಿದ್ದರು. ದೂರು ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಪ್ರಕರಣವನ್ನು ರಾಜಸ್ಥಾನಕ್ಕೆ ವರ್ಗಾಯಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement