ಉ.ಪ್ರ: ಪಾತ್ರೆ ತೊಳೆಯಲು ನಿರಾಕರಿಸಿದ ದಲಿತ ಬಾಲಕನಿಗೆ ಗುಂಡೇಟು
ಮುಜಾಫರ್ನಗರದ ಶಾಮ್ಲಿ ಜಿಲ್ಲೆಯಲ್ಲಿ ರಸ್ತೆ ಬದಿಯಲ್ಲಿರುವ ಹೋಟೆಲೊಂದರಲ್ಲಿ ತಿಂಡಿ ತಿಂದ ನಂತರ ಪಾತ್ರೆ ತೊಳೆಯಲು ನಿರಾಕರಿಸಿದ...
ಮುಜಾಫರ್ನಗರ್: ಮುಜಾಫರ್ನಗರದ ಶಾಮ್ಲಿ ಜಿಲ್ಲೆಯಲ್ಲಿ ರಸ್ತೆ ಬದಿಯಲ್ಲಿರುವ ಹೋಟೆಲೊಂದರಲ್ಲಿ ತಿಂಡಿ ತಿಂದ ನಂತರ ಪಾತ್ರೆ ತೊಳೆಯಲು ನಿರಾಕರಿಸಿದ 11ರ ಹರೆಯದ ದಲಿತ ಬಾಲಕನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ವರದಿಯಾಗಿದೆ.
ಬಾಲಕಾರ್ಮಿಕನಾಗಿರುವ ದಲಿತ ಹುಡುಗ ಮಂಗಳವಾರ ಹೋಟೆಲೊಂದರಲ್ಲಿ ಊಟ ಮಾಡಲು ಹೋಗಿದ್ದಾನೆ. ಊಟ ಮಾಡಿದ ನಂತರ ತಿಂದ ಪಾತ್ರೆಯನ್ನು ತೊಳೆಯುವಂತೆ ಹೋಟೆಲ್ನವರು ಒತ್ತಾಯಿಸಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಜಗಪಾಲ್ ಎಂಬಾತ ಬಾಲಕನ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂದು ಅಲ್ಲಿನ ಡಿಎಸ್ಪಿ ಪ್ರಕಾಶ್ ಕುಮಾರ್ ಮಾಧ್ಯಮದವರಲ್ಲಿ ಹೇಳಿದ್ದಾರೆ.
ಇದೀಗ ಪೊಲೀಸರು ಜಗಪಾಲ್ ವಿರುದ್ಧ ಕೇಸು ದಾಖಲಿಸಿದ್ದು, ಹತ್ಯೆಗೊಳಗಾದ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಕಳುಹಿಸಲಾಗಿದೆ.