ಚಿನ್ನ ಇನ್ನಷ್ಟು ದುಬಾರಿ
ಅಮೆರಿಕನ್ ಡಾಲರ್ ಮುಂದೆ ರುಪಾಯಿ ಮುಗ್ಗರಿಸಿ ಬಿದ್ದಿರುವ ಕಾರಣ ಚಿನ್ನ ಇನ್ನಷ್ಟು ದುಬಾರಿಯಾಗಿದೆ. ಬುಧವಾರ 10 ಗ್ರಾಂ ಚಿನ್ನದ ಬೆಲೆ...
ನವದೆಹಲಿ: ಅಮೆರಿಕನ್ ಡಾಲರ್ ಮುಂದೆ ರುಪಾಯಿ ಮುಗ್ಗರಿಸಿ ಬಿದ್ದಿರುವ ಕಾರಣ ಚಿನ್ನ ಇನ್ನಷ್ಟು ದುಬಾರಿಯಾಗಿದೆ. ಬುಧವಾರ 10 ಗ್ರಾಂ ಚಿನ್ನದ ಬೆಲೆ 34,622 ರು. ಆಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.
ಬುಧವಾರ ಡಾಲರ್ ಮುಂದೆ ರುಪಾಯಿ ಮೌಲ್ಯ 68.75 ಆಗುವ ಮೂಲಕ ದಾಖಲೆ ಕುಸಿತ ಕಂಡುಕೊಂಡಿದೆ.
ಷೇರುಪೇಟೆಯ ಕುಸಿತದಿಂದಾಗಿಯೇ ಚಿನ್ನದ ದರ ಮತ್ತಷ್ಟು ಏರಿಕೆ ಕಂಡುಕೊಂಡಿದೆ.
ಬಹು ಸರಕು ವಿನಿಮಯ (ಎಂಸಿಎಕ್ಸ್ )ದಲ್ಲಿ ಅಕ್ಟೋಬರ್ಗೆ ಬಟವಾಡೆ ಮಾಡಿದ ಚಿನ್ನದ ಬೆಲೆ ಗ್ರಾಂಗೆ 910 ರು. ಏರಿಕೆಯಾಗಿದ್ದು, 10 ಗ್ರಾಂಗೆ 34,622 ರು. ಆಗಿದೆ.
ಅದೇ ವೇಳೆ ಸೆಪ್ಟೆಂಬರ್ಗೆ ಬಟವಾಡೆಯಾಗಲಿರುವ ಬೆಳ್ಳಿ ಬೆಲೆಯಲ್ಲಿ ರು. 1, 710 ಏರಿಕೆ ಕಂಡಿದ್ದು, ಕೆ.ಜಿಗೆ 59,000 ರು. ಆಗಿದೆ.